ಭಾರತದ 10 ಜೂನಿಯರ್ ಆಟಗಾರರು ಸೆಮಿಫೈನಲ್‌ಗೆ
ಏಷ್ಯನ್ ಸ್ಕ್ವಾಷ್ ಚಾಂಪಿಯನ್‌ಶಿಪ್

ಚೆನ್ನೈ, ಆ.18: ಭಾರತದ ಜೂನಿಯರ್ ಆಟಗಾರರು ಏಷ್ಯನ್ ಜೂನಿಯರ್ ವೈಯಕ್ತಿಕ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜೋರ್ಡನ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 10 ಆಟಗಾರರು ವಿವಿಧ ವಿಭಾಗದಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ. ಬಾಲಕರ ವಿಭಾಗದಲ್ಲಿ ತುಷಾರ್ ಶಹಾನಿ(ಅಂಡರ್-17), ನೀಲ್ ಜೋಶಿ(ಅಂಡರ್-15), ಯುವರಾಜ್ ವಧ್ವಾನಿ ಹಾಗೂ ಪಾರ್ಥ ಅಂಬಾನಿ(ಅಂಡರ್-13) ಸೆಮಿಫೈನಲ್‌ಗೆ ತಲುಪಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಸುನೈನಾ ಕುರುವಿಲ್ಲಾ ಹಾಗೂ ಅಶಿತಾ ಪ್ರಣಯ ಬೆಂಗ್ರಾ(ಅಂಡರ್-19), ನವಮಿ ಶರ್ಮ(ಅಂಡರ್-17), ಯೋಶ್ನಾ ಸಿಂಗ್, ಅನನ್ಯ ದಾಬ್ಕೆ(ಅಂಡರ್-15), ಯುವ್ನಾ ಗುಪ್ತಾ(ಅಂಡರ್-13) ಸೆಮಿ ಫೈನಲ್‌ಗೆ ತಲುಪಿದ್ದಾರೆ ಎಂದು ಎಸ್‌ಆರ್‌ಎಫ್‌ಐ ತಿಳಿಸಿದೆ. ಬಾಲಕರ ಅಂಡರ್-19 ವಿಭಾಗದಲ್ಲಿ ದ್ವಿತೀಯ ಶ್ರೇಯಾಂಕದ ಅಭಯ್ ಸಿಂಗ್ ವಿರುದ್ಧ ಪಾಕಿಸ್ತಾನದ ಮನ್ಸೂರ್ ಝಮಾನ್ 8-11, 9-11, 11-2, 11-6, 11-9 ಅಂತರದಿಂದ ಜಯ ಗಳಿಸಿದರು.
Next Story





