ರಾಹುಲ್ ನಂ.4 ಸರದಿಯಲ್ಲಿ ಬ್ಯಾಟಿಂಗ್

ಡಂಬುಲಾ, ಆ.18: ಶ್ರೀಲಂಕಾ ವಿರುದ್ಧ ಆ.20ರಂದು ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಅಗ್ರಸರದಿಯ ದಾಂಡಿಗ ಕರ್ನಾಟಕದ ಲೋಕೇಶ್ ರಾಹುಲ್ ಅವರು ನಂ.4 ಸರದಿಯಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಕರ್ನಾಟಕದ ಇನ್ನೊಬ್ಬ ದಾಂಡಿಗ ಮನೀಷ್ ಪಾಂಡೆ ಮಧ್ಯಮ ಸರದಿಯಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಪಾಂಡೆ ಜನವರಿ 2016ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯದ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಏಕದಿನ ಶತಕ ದಾಖಲಿಸಿದ್ದರು. ಆದರೆ ಬಳಿಕ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಅವಕಾಶ ಕಳೆದುಕೊಂಡಿದ್ದರು. ಈಗ ಮತ್ತೆ 27ರ ಹರೆಯದ ಪಾಂಡೆ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಅವರಿಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವ ಸಾಧ್ಯತೆ ಇನ್ನೂ ದೃಢಪಟ್ಟಿಲ್ಲ. ಪಾಂಡೆ ಚಾಂಪಿಯನ್ಸ್ ಟ್ರೋಫಿ 15 ಸದಸ್ಯರ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದರೂ ಗಾಯದ ಕಾರಣದಿಂದಾಗಿ ಲಂಡನ್‌ಗೆ ವಿಮಾನ ಏರಲು ಸಾಧ್ಯವಾಗಿರಲಿಲ್ಲ.
Next Story





