ನಿತೀಶ್ ಬಿಜೆಪಿಯವರೇ ಆಗಿದ್ದಾರೆ: ಲಾಲು ಪ್ರಸಾದ್ ಯಾದವ್

ಪಾಟ್ನ,ಆ.19: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ಬಿಹಾರಮುಖ್ಯಮಂತ್ರಿ ನಿತೀಶ್‌ಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಈಗ ನಿತೀಶ್ ಬಿಜೆಪಿಯೇಆಗಿದ್ದಾರೆ. ಇನ್ನು ಬೇಗನೆ ಅವರು ತಾವರೆ ಚಿಹ್ನೆಯಲ್ಲಿ ಚುನಾವಣೆ ಎದುರಿಸಲಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ. "ಅವರು ದಿನಾಲೂ ಪಕ್ಷ ಬದಲಾಯಿಸುತ್ತಾರೆ. ತನ್ನ ಪಾಪಗಳನ್ನು ಮುಚ್ಚಿಡಲಿಕ್ಕಾಗಿ ಎನ್‌ಡಿಎಯ ಮೊರೆಹೋಗಿದ್ದಾರೆ. ಅಸಲಿ ಜೆಡಿಯು ಶರದ್‌ಯಾದವ್‌ರ ಬೆಂಬಲಿಗರದ್ದಾಗಿದೆ. ಆರ್‌ಜೆಡಿ ರ‍್ಯಾಲಿಯಲ್ಲಿ ಶರದ್‌ಯಾದವ್ ಭಾಗವಹಿಸಲಿದ್ದಾರೆ"ಎಂದು ಈಸಂದರ್ಭದಲ್ಲಿ ಲಾಲುಪ್ರಸಾದ್ ಯಾದವ್ ಹೇಳಿದರು.
ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಬೈಠಕ್‌ನ್ನು ಟೀಕಿಸಿದ ಲಾಲು, ಅದು ಬಿಜೆಪಿಯ ಬೈಠಕ್ ಎಂದಿದ್ದಾರೆ. ನಿತೀಶ್ ಮತ್ತು ಬಿಜೆಪಿಯ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಲಾಲು ಪ್ರಸಾದ್ ಯಾದವ್ ಸೃಜನ್ ಹಗರಣದಲ್ಲಿ ಇವರಿಬ್ಬರೂ ಇನ್ನು ಪ್ರಧಾನಿ ಮೋದಿಯ ಅನುಗ್ರಹವನ್ನು ಯಾಚಿಸಲಿದ್ದಾರೆ ಎಂದರು. ಮಾತ್ರವಲ್ಲ ಸುಶೀಲ್ ಮೋದಿ ಬಹುದೊಡ್ಡ ಲೂಟಿಕೋರ ಎಂದು ಲಾಲುಪ್ರಸಾದ್ ಯಾದವ್ ಹೇಳಿದ್ದಾರೆ.





