ಬಾಲಕಿಗೆ ಲೈಂಗಿಕ ಕಿರುಕುಳ: ಪೊಲೀಸ್ ಕಾನ್‌ಸ್ಟೇಬಲ್ ಸೆರೆ

ಬಲಿಯಾ(ಉ.ಪ್ರ),ಆ.19: ಇಲ್ಲಿಯ ರೇವತಿ ಪ್ರದೇಶದಲ್ಲಿ ಹದಿಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಓರ್ವನನ್ನು ಬಂಧಿಸಲಾಗಿದೆ. ಈ ಘಟನೆಯ ಬಗ್ಗೆ ತಿಳಿದ ಬಾಲಕಿಯ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆಯ ಕುಟುಂಬವು ಆರೋಪಿಸಿದೆ.
ಗೋಪಾಲನಗರ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಧರಮ್(38)ನನ್ನು ಶನಿವಾರ ಬಂಧಿಸಲಾಗಿದ್ದು, ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಎಸ್‌ಪಿ ವಿಜಯಪಾಲ್ ಸಿಂಗ್ ತಿಳಿಸಿದರು.
ಬಾಲಕಿ ಶುಕ್ರವಾರ ರಾತ್ರಿ ದೇಹಬಾಧೆ ತೀರಿಸಿಕೊಳ್ಳಲು ತೆರಳಿದ್ದಾಗ ಈ ಘಟನೆ ನಡೆದಿದ್ದು, ಆಕೆಯ ನೆರವಿಗಾಗಿ ಗ್ರಾಮಸ್ಥರು ಧಾವಿಸಿದಾಗ ಧರಮ್ ಸ್ಥಳದಿಂದ ಪರಾರಿಯಾಗಿದ್ದ ಎಂದೂ ಅವರು ತಿಳಿಸಿದರು.
Next Story





