ಡಾ.ಮಹಾಬಲೇಶ್ವರ ರಾವ್‌ಗೆ ಕ.ಸಾ.ಪ. ದತ್ತಿನಿಧಿ ಪುರಸ್ಕಾರ

ಉಡುಪಿ, ಆ.19: ಉಡುಪಿಯ ಡಾ.ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನ ಡಾ. ಮಹಾಬಲೇಶ್ವರ ರಾವ್ ಅವರ ‘ಅಪರಾಧಿಯ ಅಂತರಂಗ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2016ನೆ ಸಾಲಿನ ಡಾ.ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ನಿಧಿ ಪುರಸ್ಕಾರ ಲಭಿಸಿದೆ.
ನಾಡಿನ ಖ್ಯಾತ ಶಿಕ್ಷಣ ತಜ್ಞರಾಗಿರುವ ಡಾ.ರಾವ್ ಅವರ ‘ಆಗುತ್ತೆ ಅನ್ನಿ, ಆಗೋಲ್ಲ ಅನ್ಬೇಡಿ’ ಕೃತಿಗೆ 2014ರಲ್ಲಿ ಹಾಗೂ ‘ಹೆತ್ತವರೆ, ಮಕ್ಕಳ ಬಗ್ಗೆ ಕಾಳಜಿ ವಹಿಸಿ’ ಕೃತಿಗೆ 2015ರಲ್ಲಿ ಡಾ.ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ನಿಧಿ ಪುರಸ್ಕಾರ ದೊರಕಿತ್ತು ಎಂದು ಪ್ರಕಟಣೆ ತಿಳಿಸಿದೆ.
Next Story





