ಪುತ್ತೂರು: ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

ಪುತ್ತೂರು, ಆ.19: ಸವಣೂರು ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ ಹಿರಿಯ ಪ್ರಾಥಮಿಕ ಶಾಲೆ ಬೆಳಂದೂರಿನಲ್ಲಿ ನಡೆಯಿತು.
ಬೆಳಂದೂರು ಕ್ಷೇತ್ರದ ಜಿಲ್ಲಾ ಪಂ. ಸದಸ್ಯೆ ಪ್ರಮೀಳಾ ಜನಾರ್ದನ್ ಪಂದ್ಯಾಟಕ್ಕೆ ಚಾಲನೆ ನೀಡಿ, ಶುಭಕೋರಿದರು. ಬೆಳಂದೂರು ಗ್ರಾಮ ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂ. ಸದಸ್ಯರಾದ ಗೌರಿ ಸಂಜೀವ, ನಝೀರ್ ದೇವಸ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಬಿಐಇಆರ್‌ಟಿ ತಾರಾನಾಥ್ ಸವಣೂರು, ಸಿಆರ್‌ಪಿ ವೆಂಕಟೇಶ ಅನಂತಾಡಿ, ಎಸ್‌ಡಿಎಂಸಿ ಅಧ್ಯಕ್ಷ ಜಿನ್ನಪ್ಪ ಗೌಡ ಅಂಕಜಾಲು, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಪಿ.ಎಂ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜಾನಕಿ ಸ್ವಾಗತಿಸಿ, ವಸಂತಿ ತಾರಾನಾಥ್ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾವತಿ ವಂದಿಸಿದರು. ಛತ್ರಕುಮಾರ್, ಸುಲತಾ, ಸಂಧ್ಯಾ ಸಹಕರಿಸಿದರು.
ಬಾಲಕರ ವಿಭಾಗದಲ್ಲಿ ವಿದ್ಯಾರಶ್ಮಿ ಪ್ರಥಮ, ಸರಕಾರಿ ಪ್ರಾಥಮಿಕ ಶಾಲೆ ನರಿಮೊಗರು ದ್ವಿತೀಯ ಸ್ಥಾನವನ್ನೂ, ಬಾಲಕಿಯರ ವಿಭಾಗದಲ್ಲಿ ಶ್ರೀ ಕೃಷ್ಣ ಪಟ್ಟೆ ಶಾಲೆ ಪ್ರಥಮ ಹಾಗೂ ಆತಿಥೇಯ ಬೆಳಂದೂರು ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.





