2 ಬಿಲಿಯ ಡಾಲರ್ ಬೆಲೆಗೆ 22 ಸಿ ಗಾರ್ಡಿಯನ್ ಡ್ರೋನ್
ವಾಶಿಂಗ್ಟನ್, ಆ. 19: ಸುಮಾರು 2 ಬಿಲಿಯನ್ ಡಾಲರ್ (ಸುಮಾರು 12,818 ಕೋಟಿ ರೂಪಾಯಿ) ಬೆಲೆಗೆ 22 ಸೀ ಗಾರ್ಡಿಯನ್ ಡ್ರೋನ್ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ತೆಗೆದುಕೊಂಡಿರುವ ನಿರ್ಧಾರವು ಅಮೆರಿಕದಲ್ಲಿ ಸುಮಾರು 2,000 ಉದ್ಯೋಗಗಳನ್ನು ಸೃಷ್ಟಿಸುವುದು ಹಾಗೂ ದ್ವಿಪಕ್ಷೀಯ ಸಂಬಂಧವನ್ನು ಭದ್ರಪಡಿಸುವುದು ಎಂದು ಜನರಲ್ ಆಟೋಮಿಕ್ಸ್ನಲ್ಲಿ ಅಮೆರಿಕ ಮತ್ತು ಅಂತಾರಾಷ್ಟ್ರೀಯ ವ್ಯೆಹಾತ್ಮಕ ಅಭಿವೃದ್ಧಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಲಾಲ್ ‘ಅಟ್ಲಾಂಟಿಕ್ ಕೌನ್ಸಿಲ್’ಗೆ ತಿಳಿಸಿದರು.
ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತ ಘೋಷಣೆಯನ್ನು ಮಾಡಿದ್ದರು.
Next Story