ಟಿಲ್ಲರ್ ಕತ್ತಿ ತಗಲಿ ಕೃಷಿ ಮೃತ್ಯು
ಹಿರಿಯಡ್ಕ, ಆ.19: ಭೈರಂಪಳ್ಳಿ ಗ್ರಾಮದ ಕುಂಟಾಲಕಟ್ಟೆ ಎಂಬಲ್ಲಿ ಗದ್ದೆ ಯಲ್ಲಿ ಉಳುತ್ತಿರುವಾಗ ಟಿಲ್ಲರ್‌ನ ಕತ್ತಿ ತಾಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕೃಷಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಕುಂಟಾಲ್ಕಟ್ಟೆಯ ಗೋಪಾಲ ಕುಲಾಲ್(55) ಎಂದು ಗುರು ತಿಸಲಾಗಿದೆ. ಆ.5ರಂದು ಬೆಳಗ್ಗೆ ಗದ್ದೆಯಲ್ಲಿ ಟಿಲ್ಲರ್‌ನಲ್ಲಿ ಉಳುತ್ತಿದ್ದ ಗೋಪಾಲ ಕುಲಾಲ್ರ ಕಾಲು ಆಕಸ್ಮಿಕವಾಗಿ ಜಾರಿ ಟಿಲ್ಲರ್ನ ಕತ್ತಿಗೆ ತಾಗಿತು. ಇದರಿಂದ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಗೋಪಾಲ ಕುಲಾಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





