Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕಂಪ್ಯೂಟರಿನಲ್ಲಿ, ಲ್ಯಾಪ್ ಟಾಪ್ ನಲ್ಲೂ ...

ಕಂಪ್ಯೂಟರಿನಲ್ಲಿ, ಲ್ಯಾಪ್ ಟಾಪ್ ನಲ್ಲೂ ‘ಬರಕೋ ಪದ ಬರಕೋ’!

ಡಿಜಿಟಲ್ ಕನ್ನಡ

ಸತ್ಯನಾರಾಯಣ ಕೆ.ಸತ್ಯನಾರಾಯಣ ಕೆ.19 Aug 2017 11:12 PM IST
share
ಕಂಪ್ಯೂಟರಿನಲ್ಲಿ, ಲ್ಯಾಪ್ ಟಾಪ್ ನಲ್ಲೂ  ‘ಬರಕೋ ಪದ ಬರಕೋ’!

ಈ ಅಂಕಣದ ಓದುಗರೊಬ್ಬರು ಆಭಿಪ್ರಾಯ ಸಹಿತ ಪ್ರಶ್ನೆಯೊಂದನ್ನು ಕೇಳಿದ್ದಾರೆ: ‘‘ಮೊಬೈಲ್‌ನಲ್ಲಿ ಕನ್ನಡ ಆ್ಯಪ್ ಬಳಕೆಯಾಗುತ್ತಿದೆ. ಆದರೆ, ಲ್ಯಾಪ್‌ಟಾಪ್‌ನಲ್ಲಿ ಫೇಸ್‌ಬುಕ್‌ನಲ್ಲಿ ಉತ್ತರಿಸಲು ಕನ್ನಡ ಬಳಸಲು ಆಗುತ್ತಿಲ್ಲ. ಎಲ್ಲಾ ಕನ್ನಡ ಪರಿವರ್ತನೆ ಆದರೆ, ಮಧ್ಯೆ ಕೆಲವೊಂದು ಇಂಗ್ಲಿಷ್ ಬಳಸಲು ಆಗುವುದಿಲ್ಲ. ಈಗಲೂ ಲ್ಯಾಪ್‌ಟಾಪ್ ಬಳಸಿ ಫೇಸ್‌ಬುಕ್ ಅಪ್‌ಡೇಟ್ ಮಾಡುವಾಗ ಕನ್ನಡವನ್ನು ಇಂಗ್ಲಿಷ್‌ನಲ್ಲೇ ಬರೆಯುತ್ತೇವೆ. ನೀವಂದಂತೆ ನಮಗೇ ಅದು ಸರಿಹೋಗುವುದಿಲ್ಲ ಇನ್ನು ಓದುವವರಿಗೆ ಹೇಗನ್ನಿಸುತ್ತದೆ? ಮೊಬೈಲ್‌ನಲ್ಲಿ ಇದ್ದಂತೆ, ಬೇಕೆಂದಾಗ ಕನ್ನಡ ಮತ್ತು ಇಂಗ್ಲಿಷ್ ಬಳಸಲು ಲ್ಯಾಪ್‌ಟಾಪ್‌ನಲ್ಲಿ ಯಾವ ಆ್ಯಪ್ ಇದೆ ತಿಳಿಸಿ’’

‘ನುಡಿ’’ ಕನ್ನಡ ಲಿಪಿತಂತ್ರಾಂಶವನ್ನು ಬಳಸಿ ಟೈಪ್‌ಮಾಡಿ ಪತ್ರ ಲೇಖನದಂತಹ ಕೆಲಸಗಳನ್ನು ಅತ್ಯಂತ ಸುಲಭವಾಗಿ ನಿರ್ವಹಿಸುತ್ತಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಈ ಹಿಂದೆ ಇಂಥದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ಇ-ಮೇಲ್ ಕಳುಹಿಸುವುದು ಮತ್ತು ಚಾಟಿಂಗ್ ಮಾಡುವುದು ಹೇಗೆ? ಎಂಬುದು ಅವರ ಪ್ರಶ್ನೆಯಾಗಿತ್ತು. ‘ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡಿದರಂತೆ’ ಎಂಬಂತೆ ಇತ್ತು ಅವರ ಸ್ಥಿತಿ. ‘ನುಡಿ’ ತಂತ್ರಾಂಶ ಬಳಸುವಾಗ ಒಂದು ಸೆಟ್ಟಿಂಗ್ ಬದಲಾಯಿಸಿಕೊಂಡರೆ ಎಲ್ಲೆಡೆ ಕನ್ನಡವನ್ನು ಬಳಸಬಹುದು ಎಂಬ ಸಲಹೆಯ ಮೇರೆಗೆ ಎಲ್ಲೆಡೆಯಲ್ಲಿ ಕನ್ನಡ ಇಂಗ್ಲಿಷ್ ಎರಡನ್ನೂ ಏಕಕಾಲಕ್ಕೆ ಬಳಸುವಲ್ಲಿ ಯಶಸ್ವಿಯಾಗಿ, ಇಂಟರ್‌ನೆಟ್‌ನಲ್ಲಿ ಕನ್ನಡ ಬಳಸೋದು ಇಷ್ಟೊಂದು ಸುಲಭನಾ? ಎಂದು ಆಶ್ಚರ್ಯಪಟ್ಟರು. ‘ನುಡಿ’ ಚಾಲನೆಯಲ್ಲಿದ್ದಾಗ, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನ ತಳಬಲಭಾಗದ ಸಿಸ್ಟಂಟ್ರೇಯಲ್ಲಿ ‘ಕರ್ನಾಟಕ’ ನಕ್ಷೆಯು (ಐಕಾನ್) ಕಾಣಿಸುತ್ತದೆ. ಅದರ ಮೇಲೆ ಬಲ ಕ್ಲಿಕ್ ಮಾಡಿದರೆ ಕಾಣಿಸಿಕೊಳ್ಳುವ ಪಟ್ಟಿಯಲ್ಲಿ ಸಾಮಾನ್ಯವಾಗಿ ‘ಏಕಭಾಷೆ’ ಎಂಬುದು ಟಿಕ್ ಆಗಿರುತ್ತದೆ. ಅದನ್ನು ‘ಯೂನಿಕೋಡ್’ ಎಂಬುದಕ್ಕೆ ಬದಲಾಯಿಸಿಕೊಂಡರೆ ಇ-ಮೇಲ್, ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿಗಳಲ್ಲಿ ಮತ್ತು ಎಲ್ಲೆಲ್ಲಿ ಪಠ್ಯ (ಟೆಕ್ಸ್ಟ್) ಬಳಸುವ ಸೌಲಭ್ಯವಿದೆಯೋ ಅಲ್ಲೆಲ್ಲಾ ಕನ್ನಡವನ್ನು ನೇರವಾಗಿ ಟೈಪ್ ಮಾಡಬಹುದು. ಯಾವುದೇ ಫಾಂಟ್ ಆಯ್ಕೆ ಅಗತ್ಯವಿಲ್ಲ. ಸಿಸ್ಟಂನಲ್ಲಿರುವ ಯುನಿಕೋಡ್ ಫಾಂಟ್ ತಾನಾಗಿಯೇ ಸಕ್ರಿಯಗೊಳ್ಳುತ್ತದೆ. ಭಾಷಾ ಟಾಗಲ್ ಕೀಲಿಯನ್ನು ಬಳಸಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಮತ್ತೆ ಕನ್ನಡದಿಂದ ಇಂಗ್ಲಿಷ್‌ಗೆ ಬದಲಾವಣೆಗೊಳ್ಳುತ್ತಾ ಆಯಾಯ ಭಾಷೆಗಳನ್ನು ಬಳಸಬಹುದು. ‘ನುಡಿ’ ತಂತ್ರಾಂಶದಲ್ಲಿ ಸ್ಕ್ರೋಲ್‌ಲಾಕ್ ಅಥವಾ ಎಫ್12 ಕೀಲಿಗಳಲ್ಲಿ ಯಾವುದಾದರೊಂದನ್ನು ‘ಟಾಗಲ್‌ಕೀ’ಯನ್ನಾಗಿ ನಿಗದಿಪಡಿಸಿಕೊಳ್ಳಬಹುದು.

‘ಪದ’ - ಯೂನಿಕೋಡ್ ಆಧಾರಿತ ಉಚಿತ ಲಿಪಿತಂತ್ರಾಂಶ

ಕಂಪ್ಯೂಟರ್ ಆಥವಾ ಲ್ಯಾಪ್‌ಟಾಪ್‌ಗಳಲ್ಲಿ ಹೊಸದಾಗಿ ಕನ್ನಡ ಲಿಪಿತಂತ್ರಾಂಶವನ್ನು ಅಳವಡಿಸಿಕೊಂಡು ಬಳಸಲು ಉದ್ದೇಶಿಸಿ ರುವವರಿಗೆ ‘ಪದ’ ತಂತ್ರಾಂಶ ಒಂದು ಉತ್ತಮ ಆಯ್ಕೆಯಾಗಿದೆ. ಕನ್ನಡವಷ್ಟೇ ಅಲ್ಲ, ಇತರೆ 7 ಭಾರತೀಯ ಭಾಷೆಗಳನ್ನೂ ಸಹ ಬಳಸಬಹುದು. "Pada’ "PadaIME’ ಜಾಲತಾಣದಿಂದ (ವೆಬ್‌ಸೈಟ್) ಪದ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪುಟಗಟ್ಟಲೆ ಪಠ್ಯವನ್ನು ಟೈಪ್ ಮಾಡಬೇಕಾದರೆ ಎಂಬ ಸ್ವತಂತ್ರವಾದ ಎಡಿಟರ್ ಬಳಸಬಹುದು. ಹಲವಾರು ಅತ್ಯುತ್ತಮ ಸವಲತ್ತುಗಳನ್ನು ಈ ಎಡಿಟರ್ ಹೊಂದಿದೆ. ಸುಲಭವಾಗಿ ಪಿಡಿಎಫ್ ಫೈಲ್‌ಗೆ ಎಕ್ಸ್‌ಪೋರ್ಟ್ ಸಹ ಮಾಡಬಹುದು. ಸ್ಪೆಲ್‌ಚೆಕ್ಕರ್ ಲಭ್ಯವಿದೆ. ಎರಡು ಲಕ್ಷಕ್ಕೂ ಹೆಚ್ಚಿನ ಪದಗಳಿರುವ ನಿಘಂಟು ಲಭ್ಯವಿದೆ. ಎಂಬುದನ್ನು ಬಳಸಿ ಯಾವುದೇ ವಿಂಡೋಸ್ ಅಪ್ಲಿಕೇಷನ್‌ನಲ್ಲಿ ನೇರವಾಗಿ ಕನ್ನಡವನ್ನು ಟೈಪ್ ಮಾಡಬಹುದಾದ ಸೌಲಭ್ಯ.

ಹೀಗಾಗಿ, ಫೇಸ್‌ಬುಕ್, ಟ್ವಿಟರ್ ಇತ್ಯಾದಿಗಳಲ್ಲಿ ನೇರವಾಗಿ ಯಾವುದೇ ಗೊಂದಲಗಳಿಲ್ಲದೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಟೈಪ್ ಮಾಡಬಹುದು. ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಇತ್ಯಾದಿಗಳಲ್ಲಿಯೂ ಸಹ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಟೈಪ್‌ಮಾಡಬಹುದು. ಫೋನೆಟಿಕ್ ಕೀಲಿಮಣೆ ವಿನ್ಯಾಸದ ಜೊತೆಗೆ, ಕರ್ನಾಟಕ ಸರಕಾರವು ಕನ್ನಡಕ್ಕೆ ಅಧಿಕೃತಗೊಳಿಸಿರುವ ಕೆ.ಪಿ.ರಾವ್ ಲೇಔಟ್ (ನುಡಿ ವಿನ್ಯಾಸ) ಸಹ ಲಭ್ಯವಿದೆ. ‘ನುಡಿ’ ಲೇಔಟ್ ಒಂದನ್ನು ಕಲಿತರೆ ಸಾಕು ಇತರೆ ಯಾವುದೇ ಭಾರತೀಯ ಭಾಷೆಯಲ್ಲಿಯೂ ಧ್ವನಿಯಾಧಾರಿತವಾಗಿ ಟೈಪ್‌ಮಾಡಬಹುದು, ಅಂದರೆ, ಪ್ರತ್ಯೇಕವಾಗಿ ಪ್ರತಿಭಾಷೆಗೂ ಒಂದೊಂದು ಲೇಔಟ್ ಕಲಿಯುವ ಅಗತ್ಯವಿಲ್ಲ. ಭಾಷೆ ತಿಳಿದಿಲ್ಲದವರೂ ಸಹ ಟೈಪ್‌ಮಾಡಿ ಆಯಾಯ ಭಾಷೆಯ ಲಿಪಿಯಲ್ಲಿ ಪಠ್ಯವನ್ನು ಮೂಡಿಸಬಹುದು. ಉದಾಹರಣೆಗೆ, ಶಾಲೆಯಲ್ಲಿ ಹಿಂದಿ ಪ್ರಶ್ನೆಪತ್ರಿಕೆಯನ್ನು ಟೈಪ್‌ಮಾಡಲು ತಜ್ಞರನ್ನು ಹುಡುಕುವುದು ವಾಡಿಕೆ. ಆದರೆ, ಪದ ಇನ್‌ಸ್ಟಾಲ್ ಮಾಡಿಕೊಂಡರೆ ಕನ್ನಡವನ್ನು ಟೈಪ್‌ಮಾಡಿದಂತೆಯೇ ಹಿಂದಿ ಭಾಷೆಯನ್ನು ಧ್ವನಿಯಾಧಾರಿತವಾಗಿ ಟೈಪ್‌ಮಾಡಿ ಹಿಂದಿ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಬಹುದು. ಒಂದು ಭಾಷೆಯಿಂದ ಮತ್ತೊಂದಕ್ಕೆ ಲಿಪ್ಯಂತರಿಸುವ (ಭಾಷಾಂತರಿಸುವ ಅಲ್ಲ) ಸೌಲಭ್ಯ ಇರುವುದರಿಂದ, ಕನ್ನಡ ಲಿಪಿಯಲ್ಲಿಯೇ ಹಿಂದಿ ಪ್ರಶ್ನೆಪತ್ರಿಕೆಯನ್ನು ಟೈಪ್‌ಮಾಡಿ ನಂತರ ಹಿಂದಿ ಲಿಪಿಗೆ ಪರಿವರ್ತಿಸುವುದೂ ಸಾಧ್ಯ. ಬಹುಮುಖ್ಯವಾಗಿ, ಪದ ತಂತ್ರಾಂಶವು ಸಂಪೂರ್ಣ ಯೂನಿಕೋಡ್ ಎನ್‌ಕೋಡಿಂಗ್ ಆಧಾರಿತವಾಗಿರುವುದರಿಂದ ಎಲ್ಲಿಯೂ ಯಾವುದೇ ಗೊಂದಲಗಳಿಲ್ಲದೆ ಭಾಷಾ ಲಿಪಿಗಳು ಮೂಡುತ್ತವೆ. ಆಸ್ಕಿ ಎನ್‌ಕೋಡಿಂಗ್‌ನಲ್ಲಿರುವಂತೆ ವಿಚಿತ್ರ ಲಿಪಿ (ಜಂಕ್ ಕ್ಯಾರೆಕ್ಟರ್) ಸಮಸ್ಯೆ ಇಲ್ಲ.

ಪದ ತಂತ್ರಾಂಶದ ಬಹುಮುಖ್ಯ ಸವಲತ್ತೆಂದರೆ, ನಿಮ್ಮ ಕಚೇರಿಗಳಲ್ಲಿ ಹೊರಗಿನ ಯಾವುದೇ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಲು ಅವಕಾಶವಿಲ್ಲದಿರುವ ಸಂದರ್ಭದಲ್ಲಿಯೂ ಕನ್ನಡದಲ್ಲಿ ಕೆಲಸ ನಿರ್ವಹಿಸಲು ಪದ ತಂತ್ರಾಂಶದ ‘ಪೋರ್ಟಬಲ್ ಝಿಫ್ಡ್ ಫೈಲ್’ ಎಂಬ ಆವೃತ್ತಿಯನ್ನು ಅನ್‌ಝಿಪ್ ಮಾಡಿ ಕೊಂಡು ಪೆನ್‌ಡ್ರೈವ್‌ನಲ್ಲಿಟ್ಟು ಅಲ್ಲಿಂದಲೇ ಕೆಲಸ ಮುಗಿಸಿ ಪೆನ್‌ಡ್ರೈವ್ ತೆಗೆದುಕೊಂಡು ಬರಬಹುದು. ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಲೇಬೇಕೆಂದಿಲ್ಲ.

share
ಸತ್ಯನಾರಾಯಣ ಕೆ.
ಸತ್ಯನಾರಾಯಣ ಕೆ.
Next Story
X