ಬಕ್ರಿದ್‌ಗೆ ಬಂದೋಬಸ್ತ್: ಸೆಂಟ್ರಲ್ ಕಮಿಟಿ ಮನವಿ

ಮಂಗಳೂರು, ಆ. 20: ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ನೇತೃತ್ವದ ನಿಯೋಗವು ಪಶ್ಚಿಮ ವಲಯ ಐಜಿಪಿ, ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿ ಬಕ್ರೀದ್ ಹಬ್ಬಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಮನವಿ ಮಾಡಿದೆ.
ಸೆಪ್ಟಂಬರ್ ಮೊದಲ ವಾರದಲ್ಲಿ ಮುಸ್ಲಿಂ ಸಮುದಾಯವು ಆಚರಿಸುವ ಬಕ್ರೀದ್ ಹಬ್ಬ ಹಾಗೂ ಮೂರು ದಿನಗಳಲ್ಲಿ ನಡೆಯುವ ಕುರ್ಬಾನಿಗೆ ಯಾವುದೇ ತೊಂದರೆಯಾಗದಂತೆ ಬಂದೋಬಸ್ತ್ ಕಲ್ಪಿಸುವಂತೆ ಮನವಿ ಮಾಡಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಂವಿಧಾನವಾಗಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿರುವ ಹಕ್ಕುಗಳನ್ನು ರಕ್ಷಿಸಲಾಗುವುದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಮುಸ್ಲಿಂ ಸಮುದಾಯದ ಯುವಕರು ಕೂಡ ಕೋಮುಸೌಹಾರ್ದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ನಿಯೋಗದಲ್ಲಿ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಪತ್ರಿಕಾ ಕಾರ್ಯದರ್ಶಿ ಹಾಜಿ ಬಿ.ಅಬೂಬಕರ್, ಕಾರ್ಯದರ್ಶಿಗಳಾದ ಸಿ.ಎಂ.ಮುಸ್ತಫಾ, ಹಾಜಿ ರಿಯಾಝುದ್ದೀನ್, ಹಾಜಿ ಅಹ್ಮದ್ ಬಾವ ಪಡೀಲ್, ಮೊದಿನ್ ಮೋನು, ಅಹ್ಮದ್ ಬಾವ ಬಜಾಲ್, ಹಾಜಿ ಮುಹಮ್ಮದ್ ಬಪ್ಪಳಿಗೆ, ಹಾಜಿ ಮಜೀದ್ ಸಿತಾರ್, ಅದ್ದು ಹಾಜಿ ಮೊದಲಾದವರು ಉಪಸ್ಥಿತರಿದ್ದರು.





