Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕನ್ನಡತನದೊಳಗೆ ‘ಬಕಾವಲಿಯ ಹೂ’

ಕನ್ನಡತನದೊಳಗೆ ‘ಬಕಾವಲಿಯ ಹೂ’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ20 Aug 2017 11:47 PM IST
share
ಕನ್ನಡತನದೊಳಗೆ ‘ಬಕಾವಲಿಯ ಹೂ’

ರಂಗಕರ್ಮಿ ಸುಧೀರ್ ಅತ್ತಾವರ್ ಅವರ ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ ‘ಬಕಾವಲಿ ಹೂ’. ಈ ನಾಟಕದ ವಸ್ತು ಭಾರತೀಯರಿಗೆ ಚಿರಪರಿಚಿತ. ಭಾರತ ಉಪಖಂಡದ ಬಲು ಜನಪ್ರಿಯವಾಗಿರುವ ‘ಗುಲ್ ಎ ಬಕಾವಲಿ’ ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ ಸುಧೀರ್. ತನ್ನೊಳಗೆ ಭಾರತೀಯತೆಯನ್ನು ಬಚ್ಚಿಕೊಂಡಿರುವ ಈ ಪರ್ಶಿಯನ್ ಕಥಾನಕ, ತಾಜುಲ್ ಮುಲ್ಕ್ ಎನ್ನುವ ಅನಾಥ ರಾಜಕುಮಾರನ ಕರುಣೆ, ತ್ಯಾಗ, ವಿವೇಕ, ಜಾಣ್ಮೆ, ಸಾಹಸ, ನವಿರು ಶೃಂಗಾರಗಳ ಕಥೆ. ನಾಟಕೀಯತೆಗೆ ಶಕ್ತಿ ತುಂಬಬಲ್ಲ ಫ್ಯಾಂಟಸಿ, ರೋಚಕತೆಗಳು ಇಲ್ಲಿ ವ್ಯಾಪಕವಾಗಿರುವುದರಿಂದ, ಸಹಜವಾಗಿಯೇ ಉಜ್ವಲವಾದ ದೃಶ್ಯವೈಭವ ಮೇಳೈಸಿದೆ. ರಂಗಪ್ರಯೋಗ ಈ ನಿಟ್ಟಿನಲ್ಲಿ ನಿರ್ದೇಶಕನಿಗೆ ಹಲವು ಸವಾಲುಗಳನ್ನು ಒಡ್ಡುತ್ತವೆ. ಮುನ್ನುಡಿಯಲ್ಲಿ ಹೇಳುವಂತೆ, ಕಾವ್ಯಾತ್ಮಕ ಪ್ರಸ್ತುತಿಯಷ್ಟೇ ಅಲ್ಲ, ದೃಶ್ಯ ಜೋಡಣೆಯಲ್ಲೂ ಸುಧೀರ್ ತಮ್ಮ ಸಾಮರ್ಥ ಮೆರೆದಿದ್ದಾರೆ. ಸಾಧುಗಳು ಅರಸನಿಗೆ ಭವಿಷ್ಯವಾಣಿ ಹೇಳುವ ದೃಶ್ಯ, ಟೈರೀಸಿಯಸ್ ಈಡಿಪಸ್‌ಗೆ ಅವನ ಕರಾಳ ಭವಿಷ್ಯವನ್ನು ನುಡಿಯುವ ದೃಶ್ಯದಂತೆಯೇ ತಲ್ಲಣ ಗೊಳಿಸುತ್ತದೆ. ಕಣ್ಣು ಕಳೆದುಕೊಂಡ ಅರಸನ ವಿಲಾಪವೂ ಸಹಾ ಈಡಿಪಸ್‌ನ ರೋಧನದಂತೆಯೇ ಹೃದಯ ವಿದ್ರಾವಕವಾಗಿದೆ. ಅರ್ಥಪೂರ್ಣ ಚುರುಕು ಸಂಭಾಷಣೆಗಳು, ಪದ್ಯದ ಲಯವಿರುವ ಗದ್ಯಗಳು ಒಂದು ರೋಚಕ ಜಾನಪದ ಕತೆಗೆ ಪೂರಕವಾಗಿದೆ. ಸುಮಾರು 10 ಮುಖ್ಯಪಾತ್ರಗಳು ಈ ನಾಟಕಗಳಲ್ಲಿದೆ. ರಂಗಭೂಮಿಗೆ ಕನಿಷ್ಠ ಎರಡುಗಂಟೆಯಾನ್ನಾದರೂ ಈ ಸಂಗೀತನಾಟಕ ಬೇಡುತ್ತದೆ. ನೃತ್ಯ ರೂಪಕವಾಗಿಯೂ ನಾಟಕವನ್ನು ರಂಗಕ್ಕಿಳಿಸುವ ವ್ಯಾಪಕ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ರಂಗದಲ್ಲಿ ಪ್ರಯೋಗಿಸುವ ನಾಟಕಗಳ ಸಂಖ್ಯೆ ಇಳಿಮುಖವಾಗುತ್ತಿವೆ. ನಾಟಕಗಳನ್ನು ಗಂಭೀರವಾಗಿ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಎಚ್. ಎಸ್. ಶಿವಪ್ರಕಾಶ್, ಲಂಕೇಶ್, ಕಾರ್ನಾಡ್ ಸಹಿತ ಹಲವು ಹಿರಿ-ಕಿರಿಯ ಮಹತ್ವದ ಬರಹಗಾರರು ನಾಟಕ ಕ್ಷೇತ್ರದಲ್ಲಿ ಕೈಯಾಡಿಸಿದ್ದಾರೆ. ಇವರಲ್ಲೆಲ್ಲ, ರಂಗಭೂಮಿಯಿಂದ ಬಂದವರು ತೀರಾ ಕಡಿಮೆಯಾದರೂ, ರಂಗಪ್ರಯೋಗದಲ್ಲಿ ಅವರ ನಾಟಕಗಳು ಮಾಡಿದ ಕ್ರಾಂತಿ ಬಹುದೊಡ್ಡದು. ಇಲ್ಲಿ ಸುಧೀರ್ ಅತ್ತಾವರ್ ಅವರು ಸ್ವತಃ ರಂಗಕರ್ಮಿಯಾಗಿದ್ದುಕೊಂಡು ಬರೆದಿರುವ ನಾಟಕ ಇದಾದುದರಿಂದ, ರಂಗಪ್ರಯೋಗಕ್ಕೆ ಪೂರಕವಾಗಿರುವಂತೆಯೇ ನಾಟಕವನ್ನು ರಚಿಸಿದ್ದಾರೆ. ‘ಬಕಾವಲಿಯ ಹೂ’ ಕನ್ನಡ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳಬೇಕಾಗಿದೆ. ನುರಿತ ನಿರ್ದೇಶಕರು ಈ ಬಗ್ಗೆ ಗಮನಹರಿಸಬೇಕಾಗಿದೆ.

 ಅಭಿರುಚಿ ಪ್ರಕಾಶನ ಮೈಸೂರು ಹೊರತಂದಿರುವ ಕೃತಿಯ ಮುಖಬೆಲೆ 80 ರೂ. ಪುಟಗಳು 112. ಆಸಕ್ತರು 99805 60013 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X