Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಶತಮಾನದ ಸೂರ್ಯಗ್ರಹಣ ವೀಕ್ಷಿಸಲು ಜನಸಾಗರ

ಶತಮಾನದ ಸೂರ್ಯಗ್ರಹಣ ವೀಕ್ಷಿಸಲು ಜನಸಾಗರ

ವಾರ್ತಾಭಾರತಿವಾರ್ತಾಭಾರತಿ21 Aug 2017 8:00 PM IST
share
ಶತಮಾನದ ಸೂರ್ಯಗ್ರಹಣ ವೀಕ್ಷಿಸಲು ಜನಸಾಗರ

ವಾಶಿಂಗ್ಟನ್, ಆ. 21: ಎರಡು ನಿಮಿಷಗಳ ಕಾಲ ಚಂದ್ರ ಮಧ್ಯಾಹ್ನದ ವೇಳೆ ಸೂರ್ಯನನ್ನು ಭೂಮಿಯಿಂದ ಸಂಪೂರ್ಣ ಮರೆಮಾಡುವ ವಿದ್ಯಮಾನವನ್ನು ವೀಕ್ಷಿಸಲು ಲಕ್ಷಾಂತರ ಆಸಕ್ತರು ಸೇರಿದ್ದಾರೆ. 

99 ವರ್ಷಗಳ ಬಳಿಕ, ಸೋಮವಾರ ಮೊದಲ ಬಾರಿಗೆ ಅಮೆರಿಕದ ಒಂದು ಕರಾವಳಿಯಿಂದ ಇನ್ನೊಂದು ಕರಾವಳಿಯವರೆಗಿನ ಪಟ್ಟಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ (ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಮಧ್ಯರಾತ್ರಿಯ ಆಸುಪಾಸಿನಲ್ಲಿ) ಗೋಚರಿಸುತ್ತದೆ.

‘‘ಎಲ್ಲ ಗ್ರಹಣ ಕನ್ನಡಕಗಳು ಮಾರಾಟವಾಗಿವೆ’’ ಎಂಬ ಫಲಕಗಳನ್ನು ಹಲವಾರು ಖಗೋಳ ವೀಕ್ಷಣಾಲಯಗಳು ಮತ್ತು ಮ್ಯೂಸಿಯಂಗಳು ಮುಂಭಾಗದ ದ್ವಾರದಲ್ಲಿ ನೇತುಹಾಕಿವೆ.

‘‘ಸೋಮವಾರ ಸೂರ್ಯಗ್ರಹಣ’’ ಎಂಬ ಫಲಕಗಳನ್ನು ಹೆದ್ದಾರಿಗಳ ಉದ್ದಕ್ಕೂ ಹಾಕಿ ವಾಹನಿಗರಿಗೆ ಗ್ರಹಣವನ್ನು ನೆನಪಿಸುತ್ತಿವೆ.

ಸಂಪೂರ್ಣ ಸೂರ್ಯಗ್ರಹಣ ಹಾದುಹೋಗುವ ಪಥದಲ್ಲಿ ಬರುವ ಪ್ರದೇಶಗಳಲ್ಲಿ ಈಗಾಗಲೇ ಸುಮಾರು 20 ಕೋಟಿ ಜನರಿದ್ದಾರೆ. ಇಲ್ಲಿನ ಪಟ್ಟಣಗಳು ಮತ್ತು ಪಾರ್ಕ್‌ಗಳಲ್ಲಿ ಇನ್ನೂ ಲಕ್ಷಾಂತರ ಜನರು ಸೇರುತ್ತಿದ್ದಾರೆ. ಈ ಸಂಪೂರ್ಣ ಸೂರ್ಯಗ್ರಹಣವು ಅತ್ಯಂತ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ, ಅತ್ಯಂತ ಹೆಚ್ಚು ಅಧ್ಯಯನಕ್ಕೊಳಗಾದ ಮತ್ತು ಅತ್ಯಂತ ಹೆಚ್ಚು ಚಿತ್ರೀಕರಣಗೊಂಡ ಸೂರ್ಯಗ್ರಹಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

1918ರ ಬಳಿಕ ಅಮೆರಿಕದ ಮೊದಲ ಸಂಪೂರ್ಣ ಸೂರ್ಯಗ್ರಹಣ

 ಸಂಪೂರ್ಣ ಸೂರ್ಯಗ್ರಹಣವನ್ನು ಆಕಾಶದಲ್ಲಿ ನಡೆಯುವ ಅದ್ಭುತ ವಿದ್ಯಮಾನಗಳಲ್ಲೇ ಅತ್ಯದ್ಭುತ ಎಂಬುದಾಗಿ ಖಗೋಳ ವಿಜ್ಞಾನಿಗಳು ಬಣ್ಣಿಸುತ್ತಾರೆ.

 ಪ್ರತಿ ಒಂದರಿಂದ ಮೂರು ವರ್ಷಗಳ ಅವಧಿಯಲ್ಲಿ ಭೂಮಿ, ಚಂದ್ರ ಮತ್ತು ಸೂರ್ಯ ಕೊಂಚ ಸಮಯ ಸರಳ ರೇಖೆಯಲ್ಲಿ ಬಂದು ಕೊಂಚ ಅವಧಿಗೆ ಹಗಲನ್ನು ರಾತ್ರಿಯನ್ನಾಗಿ ಪರಿವರ್ತಿಸುತ್ತವೆ. ಆದರೆ, ಈ ವಿದ್ಯಮಾನಗಳು ಹೆಚ್ಚಾಗಿ ಬೃಹತ್ ಪೆಸಿಫಿಕ್ ಅಥವಾ ಧ್ರುವಗಳು ಮುಂತಾದ ಮಾನವರಹಿತ ಸ್ಥಳಗಳಲ್ಲಿ ನಡೆಯುತ್ತವೆ. ಸಾಮಾಜಿಕ ಮಾಧ್ಯಮಗಳು ಆರಂಭವಾದ ಬಳಿಕ, ಇಷ್ಟು ಜನದಟ್ಟಣೆಯ ಪ್ರದೇಶದಲ್ಲಿ ಹಾದು ಹೋಗುವ ಪ್ರಥಮ ಸೂರ್ಯಗ್ರಹಣ ಇದಾಗಿದೆ.

1918ರ ಬಳಿಕ, ಈ ಪ್ರಮಾಣದ ನೆರಳನ್ನು ಚಂದ್ರ ಅಮೆರಿಕದತ್ತ ಬೀರುವುದು ಇದೇ ಮೊದಲ ಬಾರಿಯಾಗಿದೆ.

1918ರಲ್ಲಿ ನಡೆದ ಸೂರ್ಯಗ್ರಹಣ, ಅಮೆರಿಕದಲ್ಲಿ ಒಂದು ಕರಾವಳಿಯಿಂದ ಇನ್ನೊಂದು ಕರಾವಳಿವರೆಗಿನ ಪಥದಲ್ಲಿ ನಡೆದ ಈ ಹಿಂದಿನ ಸಂಪೂರ್ಣ ಸೂರ್ಯಗ್ರಹಣವಾಗಿತ್ತು.

4,200 ಕಿ.ಮೀ. ಉದ್ದ, 113 ಕಿ.ಮೀ. ಅಗಲ

ಅಮೆರಿಕದಲ್ಲಿ 1979ರ ಬಳಿಕ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿಲ್ಲ. 1979ರಲ್ಲೂ ಕೇವಲ ವಾಯುವ್ಯದ ಐದು ರಾಜ್ಯಗಳಲ್ಲಿ ಗ್ರಹಣ ಗೋಚರಿಸಿತ್ತು.

ಈ ಬಾರಿಯ ಸಂಪೂರ್ಣ ಸೂರ್ಯಗ್ರಹಣ ಅಮೆರಿಕದ 14 ರಾಜ್ಯಗಳಲ್ಲಿ ಗೋಚರಿಸುತ್ತದೆ. ಒರೆಗಾನ್‌ನ ಲಿಂಕನ್ ಸಿಟಿಯಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 1:16ಕ್ಕೆ ಪ್ರವೇಶಿಸುವ ಗ್ರಹಣವು ಸೌತ್ ಕ್ಯಾರಲೈನದ ಚಾರ್ಲ್ಸ್‌ಟನ್ ಸಮೀಪ ಮಧ್ಯಾಹ್ನ 2:47ಕ್ಕೆ ಹೊರಹೋಗುತ್ತದೆ. ಈ ಸಂದರ್ಭದಲ್ಲಿ ಸೂರ್ಯ ಮತ್ತು ಚಂದ್ರರ ಪಥವು 4,200 ಕಿ.ಮೀ. ಉದ್ದ ಹಾಗೂ ಕೇವಲ 96ರಿಂದ 113 ಕಿ.ಮೀ. ಅಗಲವಿರುತ್ತದೆ. ಇದರ ವ್ಯಾಪ್ತಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ.

ಉಳಿದಂತೆ ಉತ್ತರ ಅಮೆರಿಕ ಖಂಡದಲ್ಲಿ ಆಂಶಿಕ ಸೂರ್ಯಗ್ರಹಣ ಸಂಭವಿಸುತ್ತದೆ.

ಅಮೆರಿಕದಲ್ಲಿ ಮುಂದಿನ ಸಂಪೂರ್ಣ ಸೂರ್ಯಗ್ರಹಣ ನಡೆಯುವುದು 2024ರಲ್ಲಿ. ಮುಂದಿನ ಕರಾವಳಿಯಿಂದ ಕರಾವಳಿವರೆಗಿನ ಸೂರ್ಯಗ್ರಹಣ ನಡೆಯುವುದು 2045ರಲ್ಲಿ.

ಕರ್ನಾಟಕದಲ್ಲಿ ನಡೆದ 1980ರ ಆ ಸೂರ್ಯಗ್ರಹಣ

ಭಾರತದಲ್ಲಿ 1980 ಫೆಬ್ರವರಿ 16ರ ಶನಿವಾರ ನಡೆದ ಸಂಪೂರ್ಣ ಸೂರ್ಯಗ್ರಹಣವನ್ನು ಅದನ್ನು ವೀಕ್ಷಿಸಿದವರು ಮರೆಯಲಿಕ್ಕಿಲ್ಲ. ಅದರ ಬಳಿಕ ಹುಟ್ಟಿದವರು ಅದರ ಬಗ್ಗೆ ಕೇಳಿ ತಿಳಿದಿರಬಹುದು.

ಅಂದು ಮಧ್ಯಾಹ್ನದ ಸುಮಾರಿಗೆ ದಕ್ಷಿಣ ಭಾರತವು ಕೆಲವು ನಿಮಿಷಗಳವರೆಗೆ ಸಂಪೂರ್ಣ ಕತ್ತಲಾಗಿತ್ತು. ಕರ್ನಾಟಕದ ಕರಾವಳಿ ಜಿಲ್ಲೆಗಳೂ ಸಂಪೂರ್ಣ ಸೂರ್ಯಗ್ರಹಣದ ವ್ಯಾಪ್ತಿಗೆ ಒಳಪಟ್ಟಿದ್ದವು.

ನಡು ಮಧ್ಯಾಹ್ನ ಕತ್ತಲಾಗುತ್ತಿದ್ದಂತೆಯೇ ಕಾಗೆಗಳು ಮತ್ತು ಇತರ ಹಕ್ಕಿಗಳು ಗೊಂದಲಕ್ಕೊಳಗಾಗಿ ತಮ್ಮ ಗೂಡುಗಳಿಗೆ ಮರಳಿದ್ದು ದಾಖಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X