ಗಾಂಜಾ ಸಹಿತ ಇಬ್ಬರು ಆರೋಪಿಗಳ ಬಂಧನ

ಕಾಸರಗೋಡು, ಆ. 21: ಗಾಂಜಾ ಸಹಿತ ಬೀದಿ ವ್ಯಾಪಾರಿ ಸೇರಿದಂತೆ ಇಬ್ಬರನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತರನ್ನು ಹಳೆ ಬಸ್ ನಿಲ್ದಾಣ ಪರಿಸರದ ವ್ಯಾಪಾರಿ ಬಿ ಯು ಅಬೂಬಕ್ಕರ್ (56) ಮತ್ತು ಕಾರ್ಮಿಕ ತಕ್ಬೂರ್ ಬಿಸ್ವಾಸ್ (42) ಎಂದು ಗುರುತಿಸಲಾಗಿದೆ.
ಇವರಿಂದ 300 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಓಣಂ ಮತ್ತು ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು , ಇದಕ್ಕಾಗಿ ಸ್ಪೆಷಲ್ ಡ್ರೈವ್ ನ್ನು ತೀವ್ರಗೊಳಿಸಲಾಗಿದೆ. ವಿಶೇಷ ತಂಡವು ಜಿಲ್ಲೆಯ ಹಲವೆಡೆ ವಿಶೇಷಾ ನಿಗಾ ಇರಿಸಿದೆ.
Next Story





