ಆ. 27ರಂದು ‘ಗದ್ದೆಯಲ್ಲಿ ಯುವ ಒಗ್ಗಟ್ಟು’ ಸ್ಫರ್ಧಾಕೂಟ
ಉಡುಪಿ, ಆ.21: ಕಟಪಾಡಿ ಸಂತ ವಿನ್ಸೆಂಟ್ ಡಿಪಾವ್ಲ್ ದೇವಾಲಯದ ಭಾರತೀಯ ಕೆಥೋಲಿಕ್ ಯುವ ಸಂಚಾಲನವು ಐಸಿವೈಎಂ ಉಡುಪಿ ವಲಯದ ಸಹಕಾರದೊಂದಿಗೆ ಉಡುಪಿ ಧರ್ಮಪ್ರಾಂತ್ಯದ ಯುವಜನರಿಗಾಗಿ ‘ಗದ್ದೆಯಲ್ಲಿ ಯುವ ಒಗ್ಗಟ್ಟು’ ಕೆಸರು ಗದ್ದೆ ಸ್ಪರ್ಧೆಯನ್ನು ಆ.27ರಂದು ಕಟಪಾಡಿ ಚೊಕ್ಕಾಡಿಯಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8ಗಂಟೆಗೆ ಚರ್ಚ್‌ನಲ್ಲಿ ದಿವ್ಯಪೂಜೆ ನಡೆಯಲಿದ್ದು, ಬಳಿಕ ನಡೆಯುವ ಮೆರವಣಿಗೆಗೆ ಕಟಪಾಡಿ ಗ್ರಾಪಂ ಅಧ್ಯಕ್ಷೆ ಜೂಲಿಯೆಟ್ ವೀರಾ ಡಿಸೋಜ ಚಾಲನೆ ನೀಡಲಿರುವರು. ಬೆಳಗ್ಗೆ 10ಗಂಟೆಗೆ ಸ್ಪರ್ಧೆಯನ್ನು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿರುವರು. ಸಂಜೆ 5ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಪ್ರಿಯಾಂಕ ವೆುೀರಿ ಫ್ರಾನ್ಸಿಸ್ ಭಾಗವಹಿಸಲಿರುವರು.
ವಾಲಿಬಾಲ್, ತ್ರೋಬಾಲ್, ಓಟ, ಹೆಗಲ ಮೇಲೆ ಹೊತ್ತೊಯ್ಯುವ ಓಟ, ಪಿರಮಿಡ್, ರಿಲೇ, ಮೂರು ಕಾಲಿನ ಓಟ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯ ಲಿವೆ. ಧರ್ಮಪ್ರಾಂತ್ಯ ವ್ಯಾಪ್ತಿಯ 51 ಚರ್ಚ್‌ಗಳ ಪೈಕಿ 29 ಚರ್ಚ್ ಗಳು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದೆ. ಅತ್ಯಂತ ಹೆಚ್ಚು ಅಂಕ ಗಳಿಸುವ ತಂಡಕ್ಕೆ ಸಮಗ್ರ ಪ್ರಶಸ್ತಿ ನೀಡಲಾಗುವುದು. ಸುಮಾರು 700 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಚರ್ಚ್‌ನ ಧರ್ಮಗುರು ಫಾ.ರೋನ್ಸನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂಚಾಲನದ ಅಧ್ಯಕ್ಷ ಲೈನಲ್ ಪಿರೇರಾ, ವಿಲ್ಫ್ರೇಡ್ ಲೂವಿಸ್ ಸುದ್ದಿಗೋಷ್ಠಿ ಯಲ್ಲಿ ಹಾಜರಿದ್ದರು.







