ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
ಮಣಿಪಾಲ, ಆ.21: ಕುಂಜಿಬೆಟ್ಟು ವಿ.ಪಿ.ನಗರದ ಐದನೆ ಕ್ರಾಸ್ನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ವಿ.ಪಿ.ನಗರದ ಸೀತಾರಾಮ ಶೇರಿಗಾರ ಎಂಬವರ ಮನೆಯ ಹಿಂಬದಿಯ ಕಿಟಕಿಯ ಸರಳನ್ನು ಮುರಿದು ಒಳಗೆ ನುಗ್ಗಿದ ಕಳ್ಳರು, ಕಪಾಟಿನ ಲ್ಲಿಟ್ಟಿದ್ದ 2,00,000 ರೂ. ಮೌಲ್ಯದ 75.25 ಗ್ರಾಂ ತೂಕದ ಚಿನ್ನಾಭರಣ, 20,000 ರೂ. ಮೌಲ್ಯದ ಬೆಳ್ಳಿಯ ಸೊತ್ತು, 10,000ರೂ. ಮೌಲ್ಯದ ಲ್ಯಾಪ್ಟಾಪ್, 2 ಮೊಬೈಲ್ಗಳು, 1,20,00ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ವೌಲ್ಯ 2,52,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story