ಮಟ್ಕಾ: ಮೂವರ ಬಂಧನ
ಕೋಟ, ಆ.21: ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿ ಆ.21ರಂದು ಬೇಳೂರು ಗ್ರಾಮದ ದೇವಸ್ಥಾನಬೆಟ್ಟು ಸೊಸೈಟಿ ಸಮೀಪ ಬೇಳೂರಿನ ಉದಯ ಕಾಂಚನ್(43) ಮತ್ತು ತೆಕ್ಕಟ್ಟೆ ಗ್ರಾಮದ ಮಲ್ಯಾಡಿ ಎಂಬಲ್ಲಿ ಮಲ್ಯಾಡಿಯ ಪ್ರವೀಣ ಶೆಟ್ಟಿ (39) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ತ್ರಾಸಿ ಜಂಕ್ಷನ್ ಬಳಿ ಆ.21ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ದಾಕುಹಿತ್ಲುವಿನ ಲಕ್ಷ್ಮಣ ಪೂಜಾರಿ(50) ಎಂಬಾತನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
Next Story





