ವಾಹನ ಢಿಕ್ಕಿ: ಮಹಿಳೆ ಸಾವು

ಮದ್ದೂರು, ಆ.21: ಅಪರಿಚಿತ ವಾಹನ ಢಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಪಟ್ಟಣದ ಮದ್ದೂರಮ್ಮ ದೇಗುಲದ ಎದುರಿನ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಪಟ್ಟಣದ ಶಿಕ್ಷಕರ ಬಡಾವಣೆ ನಿವಾಸಿ ನಿವೃತ್ತ ಶಿಕ್ಷಕ ತಿಮ್ಮಯ್ಯ ಅವರ ಪತ್ನಿ ಸಿ.ಎನ್.ಸುಧಾ(56) ಮೃತ ಮಹಿಳೆಯಾಗಿದ್ದು, ಈಕೆ ಮುಂಜಾನೆ ವಾಯವಿಹಾರಕ್ಕೆ ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಅಪರಿಚಿತ ವಾಹನ ಢಿಕ್ಕಿಯೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪಟ್ಟಣಸ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





