ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್: ದಿವ್ಯಭಾರತ್ ಕರಾಟೆ ತಂಡಕ್ಕೆ ಪದಕ

ಶಿಡ್ಲಘಟ್ಟ, ಆ.21: ಗೌರಿ ಬಿದನೂರಿನಲ್ಲಿ ನಡೆದ ಮೂರನೇ ವರ್ಷದ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ನಗರದ ದಿವ್ಯಭಾರತ್ ಕರಾಟೆ ಡೊ ಅಸೋಸಿಯೇಶನ್ ನ ಕರಾಟೆ ಪಟುಗಳು ಭಾಗವಹಿಸಿ ಪದಕಗಳನ್ನುಗೆದ್ದಿದ್ದಾರೆ.
ವೈಟ್ ಬೆಲ್ಟ್ ಕಟಾ ಸ್ಪರ್ಧೆಯಲ್ಲಿ ಪಿ.ಎಂ.ಚೇತನ್ ಮೂರನೇ ಸ್ಥಾನ, ಆರೆಂಜ್ ಬೆಲ್ಟ್ ಕಟಾ ಸ್ಪರ್ಧೆಯಲ್ಲಿ ನಂದೀಶ್ ಪ್ರಥಮ ಸ್ಥಾನ, ಬ್ಲು ಬೆಲ್ಟ್ ಕಟಾ ಸ್ಪರ್ಧೆಯಲ್ಲಿ ಜಗದೀಶ್ ಮೂರನೇ ಸ್ಥಾನ ಪಡೆದಿದ್ದಾರೆ. ಹಾಗೂ ಕುಮಿತೆ ಸ್ಪರ್ಧೆಯಲ್ಲಿ ಜಗದೀಶ್ ಪ್ರಥಮ, ಸಿ.ಚೇತನ್ ಎರಡನೇ ಸ್ಥಾನ, ಹರ್ಷಿತ್ ಮತ್ತು ಚಂದನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಕರಾಟೆ ಶಿಕ್ಷಕ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.
Next Story





