ಮನಪಾ: ನೀರಿನ ಬಿಲ್ ಪಾವತಿ ಮಾಡದಿದ್ದರೆ ಸಂಪರ್ಕ ಕಡಿತ
ಮಂಗಳೂರು, ಆ. 21: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಯಥಾಪ್ರಕಾರ ನೀರಿನ ಬಿಲ್ ವಿತರಣೆಯಾಗುತ್ತಿದೆ. ಆದರೆ ಬಳಕೆದಾರರು ಸರಿಯಾಗಿ ಬಿಲ್ ಪಾವತಿಸದೆ ಬಾಕಿ ಉಳಿಸಿದ್ದು, ಅಂತಹ ಬಳಕೆದಾರರು 15 ದಿನದೊಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಕಾನೂನು ರೀತಿಯಲ್ಲಿ ನೀರಿನ ಸಂಪರ್ಕ ಪಡೆದು ಕಡಿತಗೊಳಿಸಿ ನಿಯಮಾನುಸಾರ ಕ್ರಮವಹಿಸಲಾಗುವುದು.
ಸಾರ್ವಜನಿಕರು ಅನಧಿಕೃತವಾಗಿ/ಮೀಟರ್ ಅಳವಡಿಸದೆ ನೀರಿನ ಸಂಪರ್ಕ ಪಡೆದುಕೊಂಡಲ್ಲಿ ಅಂತಹ ಸಂಪರ್ಕಗಳ ಬಗ್ಗೆ ಪಾಲಿಕೆಗೆ 15 ದಿನದೊಳಗೆ ಮಾಹಿತಿ ನೀಡಿ ಸಕ್ರಮಗೊಳಿಸಬೇಕು. ಇಲ್ಲದಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮನಪಾ ಆಯುಕ್ತರ ಪ್ರಕಟನೆ ತಿಳಿಸಿದೆ.
Next Story





