ಅಕ್ರಮ ಜಾನುವಾರು ಸಾಗಾಟ: ಚಾಲಕನ ಬಂಧನ

ಮುಂಡಗೋಡ, ಆ.21: ತಾಲೂಕಿನ ಕುಸೂರ ಕ್ರಾಸ್ ಬಳಿ ಟಾಟಾ.ಎಸ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಲೆ ಪೊಲೀಸರು ದಾಳಿ ಮಾಡಿ ಜಾನುವಾರಗಳ ಸಮೇತ ಚಾಲಕನನ್ನು ಬಂಧಿಸಿದ್ದಾರೆ.
ಹಾನಗಲ್ ತಾಲೂಕಿನ ಯಳ್ಳೂರ ಗ್ರಾಮದ ಸಂತೋಷ ಹುಣಸಿಕಟ್ಟಿ ಬಂಧಿತ ವಾಹನ ಚಾಲಕ ಎಂದು ತಿಳಿದು ಬಂದಿದೆ.
ವಾಹನದಲ್ಲಿ ಒಂದು ಹೋರಿ, ಒಂದು ಹೋರಿ ಮರಿ, ಎರಡು ಕೋಣ, ಎರಡು ಎಮ್ಮೆ ಕರು ಇತ್ತು. ಬಂಧಿತ ವಾಹನ ಚಾಲಕನು ಈ ಜಾನುವಾರುಗಳಿಗೆ ಆಹಾರ ನೀರು ನೀಡದೇ ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ನಂದಿಕಟ್ಟಿ ಗ್ರಾಮದಿಂದ ಉಗ್ಗಿನಕೇರಿ ಮಾರ್ಗವಾಗಿ ಹಾನಗಲ್ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಎನ್ನಲಾಗಿದೆ.
ಈ ವೇಳೆ ಕುಸೂರ ಕ್ರಾಸ್ ಬಳಿ ಪಿಸ್ಸೈ ಲಕ್ಕಪ್ಪ ನಾಯ್ಕ ಹಾಗೂ ಪೊಲೀಸ ಸಿಬ್ಬಂದಿಗಳು ದಾಳಿ ಮಾಡಿ ಜಾನುವಾರುಗಳನ್ನು ಮತ್ತು ವಾಹನ ಚಾಲಕನನ್ನು ಬಂಧಿಸಿದ್ದಾರೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





