ಡಿಮಿಟ್ರೊವ್, ಮುಗುರುಝಗೆ ಸಿನ್ಸಿನಾಟಿ ಕಿರೀಟ
►ಡಿಮಿಟ್ರೊವ್ಗೆ ಚೊಚ್ಚಲ ಮಾಸ್ಟರ್ಸ್ ಪ್ರಶಸ್ತಿ ►ಅಮೆರಿಕದಲ್ಲಿ ಮೊದಲ ಟ್ರೋಫಿ ಜಯಿಸಿದ ಮುಗುರುಝ
ಸಿನ್ಸಿನಾಟಿ, ಆ.21: ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವ್ ಮತ್ತು ಸ್ಪೇನ್ನ ಗಾರ್ಬೈನಾ ಮುಗುರುಝ ಅವರು ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಡಿಮಿಟ್ರೋವ್ ಅವರು ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಅವರನ್ನು 6-3, 7-5 ನೇರ ಸೆಟ್ಗಳಿಂದ ಸೋಲಿಸಿದರು.
ಸ್ಪೇನ್ನ ಆರನೆ ಶ್ರೇಯಾಂಕದ ಮುಗುರುಝ ಅವರು ರುಮೇನಿಯಾದ ಸಿಮೊನಾ ಹಾಲೆಪ್ ಅವರನ್ನು 6-1, 6-0 ಅಂತರದಲ್ಲಿ ಸೋಲಿಸಿದರು. ಇವರ ನಡುವೆ ಹಣಾಹಣಿ 56 ನಿಮಿಷಗಳಲ್ಲಿ ಕೊನೆಗೊಂಡಿತು.
ವಿಂಬಲ್ಡನ್ ಚಾಂಪಿಯನ್ ಮುಗುರುಝ ಇದರೊಂದಿಗೆ ಈ ವರ್ಷ ಎರಡನೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಹಾಲೆಪ್ ಪ್ರಮುಖ ಚಾಂಪಿಯನ್ಶಿಪ್ನಲ್ಲಿ ಮೂರನೆ ಸೋಲು ಅನುಭವಿಸಿದ್ದಾರೆ. ಹಾಲೆಪ್ ಫ್ರೆಂಚ್ ಓಪನ್ನ ಫೈನಲ್ನಲ್ಲಿ ಜೆಲೆನಾ ಒಸ್ಟಾಪೆಂಕೊ ಮತ್ತು ವಿಂಬಲ್ಡನ್ ಕ್ವಾರ್ಟರ್ ಫೈನಲ್ನಲ್ಲಿ ಜೋಹಾನ ಕೊಂಟಾ ವಿರುದ್ಧ ಸೋಲು ಅನುಭವಿಸಿದ್ದರು.
ಮುಗುರುಝ ಅವರು ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಸ್ಪೇನ್ನ ಕರೋಲಿನಾ ಪ್ಲಿಸ್ಕೋವಾ ವಿರುದ್ಧ 6-3, 6-2 ನೇರ ಸೆಟ್ಗಳಿಂದ ಜಯ ಗಳಿಸಿ ಫೈನಲ್ ತಲುಪಿದ್ದರು.
ಇದೇ ವೇಳೆ ಸಿಮೊನಾ ಹಾಲೆಪ್ ಅವರು ಅಮೆರಿಕದ ಸ್ಲೋವಾನ್ ಸ್ಟಿಫನ್ಸ್ ಅವರನ್ನು 6-2, 6-1 ನೇರ ಸೆಟ್ಗಳೊಂದಿಗೆ ಸೋಲಿಸಿ ಫೈನಲ್ನಲ್ಲಿ ಅವಕಾಶ ದೃಢಪಡಿಸಿದ್ದರು.