ಕೇರಳ: 3ವರ್ಷದಲ್ಲಿ ಕಾಣೆಯಾದ 2,221 ಮಕ್ಕಳಲ್ಲಿ ಇನ್ನೂ 50 ಮಂದಿ ಪತ್ತೆಯಾಗಿಲ್ಲ
ಕೊಚ್ಚಿ,ಆ.22: ಮೂರು ವರ್ಷಗಳಲ್ಲಿ ಕಾಣೆಯಾಗಿರುವ ಮಕ್ಕಳಲ್ಲಿ ಇನ್ನೂ 50 ಮಂದಿ ಪತ್ತೆಯಾಗಿಲ್ಲ ಎಂದು ಕೇರಳ ಪೊಲೀಸರು ಹೈಕೋರ್ಟಿಗೆ ತಿಳಿಸಿದ್ದಾರೆ. 2014ರ ಆಗಸ್ಟ್ ಒಂದರಿಂದ 2017 ಆಗಸ್ ಒಂದರವರೆಗೆ 2221 ಮಕ್ಕಳು ಕಾಣೆಯಾಗಿದ್ದಾರೆ. ಇವರಲ್ಲಿ 2171 ಮಂದಿಯನ್ನು ನಂತರ ಪತ್ತೆಹಚ್ಚಲಾಯಿತು ಎಂದು ಪೊಲೀಸರು ಹೈಕೋರ್ಟಿಗೆ ವಿವರಣೆ ಪತ್ರ ಸಲ್ಲಿಸಿದ್ದಾರೆ. 15ವರ್ಷದ ಪುತ್ರ ನಿಝಾಮುದ್ದೀನ್ ಕಳೆದ ಎಪ್ರಿಲ್ ಎಂಟರಿಂದ ನಾಪತ್ತೆಯಾಗಿದ್ದಾನೆ ಎಂದು ತಂದೆ ಆಲಪ್ಪುಝದ ಪಾಣವಳ್ಳಿ ತಾಜು ಎನ್ನುವವರು ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯ ಪರಿಗಣನೆಯ ವೇಳೆ ಎಐಜಿ ವಿ. ಗೋಪಾಲಕೃಷ್ಣನ್ರು ಕೋರ್ಟಿಗೆ ವಿವರ ಸಲ್ಲಿಸಿದ್ದಾರೆ. ಮೂರುವರ್ಷಗಳಲ್ಲಿ ಕಾಣೆಯಾಗಿರುವ ಹದಿನೈದು ವರ್ಷಕ್ಕಿಂತ ಕೆಳವಯೋಮಾನದವರ ವಿವರಗಳನ್ನುನೀಡುವಂತೆ ಕೋರ್ಟ್ ಡಿಜಿಪಿಗೆ ಸೂಚಿಸಿತ್ತು.
ಕಾಣೆಯಾದ ಮಕ್ಕಳ ವಿವರಗಳನ್ನು ದೂರು ಲಭಿಸುವ ಪೊಲೀಸ್ಠಾಣೆಯ ಅಧಿಕಾರಿಗಳು, ದೃಶ್ಯ, ಶ್ರಾವ್ಯ, ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಾರೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳನ್ನು ಕೇಂದ್ರೀಕರಿಸಿ ಮಾಹಿತಿ ಸಂಗ್ರಹಿಸುತ್ತಾರೆ. ತನಿಖೆಯ ಮೇಲೆ ನಿಗಾವರಿಸಲು ಜಿಲ್ಲಾಮಟ್ಟದಲ್ಲಿಕ್ರೈಂ ರಿಕಾರ್ಡ್ ಬ್ಯೂರೊದ ಡಿವೈಎಸ್ಪಿಯವರನ್ನು ನೋಡಲ್ ಅಧಿಕಾರಿಯಾಗಿ ಮಾಡಿದ ವ್ಯವಸ್ಥೆ ಮಾಡಲಾಗಿದೆ. ಪ್ರಕರಣದಾಖಲಾಗಿ ಹದಿನೈದು ದಿವಸಕಳೆದರೂ ಮಕ್ಕಳು ಪತ್ತೆಯಾಗದಿದ್ದರೆ ಜಿಲ್ಲಾ ಮಿಸ್ಸಿಂಗ್ ಪರ್ಸನ್ ಟ್ರೇಸಿಂಗ್ ಯುನಿಟ್(ಡಿಎಂಪಿಟಿಯು) ಮತ್ತು ನಾಪತ್ತೆಯಾಗಿ ನಾಲ್ಕು ತಿಂಗಳು ಆಗಿದ್ದರೆ ಜಿಲ್ಲಾಮಾನವ ಕಳ್ಳಸಾಗಾಟ ತಡೆ ಯನಿಟ್ (ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಯುನಿಟ್) ಪ್ರಕರಣವನ್ನು ವಹಿಸಿಕೊಳ್ಳುತ್ತದೆ.
ಕೇರಳ ಕ್ರೈಂ ರೆಕಾಡ್ರ್ಸ್ ಬ್ಯೂರೊದ ತಲಾಶ್ ವಿಂಗ್ ಕಾಣೆಯಾದ ಮಕ್ಕಳ ವಿವರ, ಕ್ರಿಮಿನಲ್ ಇಂಟಲಿಜೆನ್ಸ್ ಗಜೆಟ್ನಲ್ಲಿ ಮತ್ತುಟ್ರಾಕ್ ದಿ ಮಿಸ್ಸಿಂಗ್ ಚೈಲ್ಡ್ ಎನ್ನುವ ವೆಬ್ಸೈಟ್ನಲ್ಲಿಯೂ ಪ್ರಕಟಿಸುತ್ತದೆಎಂದು ಹೈಕೋರ್ಟಿಗೆ ಸಲ್ಲಿಸಿದ ವಿವರಗಳಲ್ಲಿತಿಳಿಸಲಾಗಿದೆ. ಕೇಸನ್ನು ಪರಿಗಣಿಸಿದ ಕೋರ್ಟು ಆಗಸ್ಟ್ 25ಕ್ಕೆ ಪುನಃ ವಿಚಾರಣೆಗೆ ಎತ್ತಿಕೊಳ್ಳಲಿದೆ.