ಬಸ್ ಢಿಕ್ಕಿ : ಬೈಕ್ ಸವಾರ ಮೃತ್ಯು

ಗುಂಡ್ಲುಪೇಟೆ,ಆ.22: ಬೈಕಿಗೆ ಸಾರಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಖಾಸಗಿ ಫೈನಾನ್ಸ್ ಉದ್ಯೋಗಿ ಸಾವನ್ನಪ್ಪಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅಣ್ಣೂರುಕೇರೆ ಗ್ರಾಮದ ಬಳಿ ನಡೆದಿದೆ.
ಪಟ್ಟಣದಲ್ಲಿರುವ ಉಜ್ಜೀವನ್ ಎಂಬ ಖಾಸಗಿ ಫೈನಾನ್ಸ್‍ನಲ್ಲಿ ಫೀಲ್ಡ್ ಆಫೀಸರ್ ಚಂದ್ರಶೇಖರ್( 30) ಸಾವಿಗೀಡಾಗಿದ್ದು ಸಹಸವಾರ ಚಿಕ್ಕಾಟಿ ಗ್ರಾಮದ ಜಗದೀಶ್( 30) ಗಂಭೀರ ಗಾಯಗೊಂಡವರು.
ಘಟನೆಗೆ ಸಂಬಂದಿಸಿದಂತೆ ಪೋಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Next Story





