ಕೊಡಗು ಜಿಲ್ಲೆಯನ್ನು ಅಪರಾದ ಮುಕ್ತ ಜಿಲ್ಲೆಯಾಗಿಸಲು ಕಾರ್ಯಯೋಜನೆ : ಎಸ್.ಪಿ. ರಾಜೇಂದ್ರ ಪ್ರಸಾದ್

ಕುಶಾಲನಗರ,ಆ 22 : ಕೊಡಗು ಜಿಲ್ಲೆಯನ್ನು ಅಪರಾಧ ಮುಕ್ತ ಹಾಗೂ ಅಪಘಾತ ಮುಕ್ತ ವಲಯನ್ನಾಗಿಸಲು ಪೋಲಿಸ್ ಇಲಾಖೆ ಎಲ್ಲಾ ರೀತಿಯ ಕಾರ್ಯಯೋಜನೆಗಳನ್ನು ರೂಪಿಸಿದೆ. ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಕೊಡಗು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ರಾಜೇಂದ್ರ ಪ್ರಸಾದ್ ಇಂದಿಲ್ಲಿ ಹೇಳಿದರು.
ಕುಶಾಲನಗರದ ಪೋಲಿಸ್ ಉಪ ಆಧೀಕ್ಷಕರು.ಪೋಲಿಸ್ ವೃತ್ತ ನಿರೀಕ್ಷಕರು,ಮತ್ತು ಕುಶಾಲನಗರ ಠಾಣಾ ಕಚೇರಿಗಳ ವತಿಯಿಂದ ಸ್ಥಳೀಯ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯಾದ್ಯಂತ ಈಗಾಗಲೇ ಅಂದಾಜು ರೂ. 70 ಲಕ್ಷ ರೂ ವೆಚ್ಚದಲ್ಲಿ ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹೆದ್ದಾರಿ ಮತ್ತು ಇತರೆ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಅಪರಾದ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಹೆಚ್ಚಿನ ಭದ್ರತಾ ದೃಷ್ಟಿಯಿಂದ ಇನ್ನೂ 120 ಸಿ.ಸಿ. ಕ್ಯಾಮೆರಾಗಳ ಅಳವಡಿಕೆಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಕುಶಾಲನಗರ ಗೋಣಿಕೊಪ್ಪ ನಗರದಲ್ಲಿ ಸಿಗ್ನಲ್ ಪಾಯಿಂಟ್ ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ರೂ 1 ಕೋಟಿ ವೆಚ್ಚದಲ್ಲಿ ನ ಕಾರ್ಯ ದ ಯೋಜನೆಗೆ ಇಲಾಖೆಯಿಂದ ಮನವಿ ಸಲ್ಲಿಸಲಾಗಿದೆ. ಸ್ಥಳೀಯ ವಿದಾನ ಪರಿಷತ್, ಶಾಸಕರು ಹಾಗೂ ಸಂಸದರ ನಿಧಿಯಿಂದ ಇಲಾಖೆಗೆ ಅನುದಾನ ನೀಡಲು ಕೋರಲಾಗಿದೆ. ಎಂದು ತಿಳಿಸಿದ ರಾಜೇಂದ್ರ ಪ್ರಸಾದ್. ನಾಗರೀಕರು ಮತ್ತು ಜನಪ್ರತಿನಿದಿಗಳು ಸಂಘು ಸಂಸ್ಥೆಗಳ ಸಹಕಾರದೊಂದಿಗೆ. ಕೊಡಗು ಜಿಲ್ಲೆಯಾನ್ನು ಮಾದರಿ ಜಿಲ್ಲೆಯಾನ್ನಾಗಿಸುವಲ್ಲಿ ಸಾದ್ಯ ಎಂದು ಆಬಿಪ್ರಾಯಪಟ್ಟರು.
ಜಿಲ್ಲೆಯ ಪೋಲಿಸರು ಅದಿಕಾರಿಗಳು ಹಾಗೂ ಜನತೆಯ ಸಹಕಾರದೊಂದಿಗೆ.ಶಾಂತಿ ಮೂಡಿಸುವ ಕೆಲಸದಲ್ಲಿ ಪೋಲಿಸ್ ಇಲಾಖೆ ಯಸಸ್ವಿಯಾಗಿದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಎಂದರು.
ಪೋಲಿಸ್ ಇನ್ಸ್ ಪೆಕ್ಟರ್‍ಗಳಾದ ಮೇದಪ್ಪ. ಕ್ಯಾತೇಗೌಡ, ಪರಶಿವ ಮೂರ್ತಿ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಚರಣ್ ವಿವಿಧ ಸಂಘ ಸಂಸ್ಥೇಗಳ ಪ್ರಮುಖರು. ಆದಿಕಾರಿಗಳು ಇದ್ದರು. ಗ್ರಾಮಾಂತರ ಠಾಣಾದಿಕಾರಿ ಜೆ.ಈ. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ನಗರ ಠಾಣಾದಿಕಾರಿ ಜಗದೀಶ್ ವಂದಿಸಿದರು.







