Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರೊ. ಎಂ. ರಾಮಚಂದ್ರ 'ವಿದ್ವತ್ ಪರಂಪರಾ...

ಪ್ರೊ. ಎಂ. ರಾಮಚಂದ್ರ 'ವಿದ್ವತ್ ಪರಂಪರಾ ಪ್ರಶಸ್ತಿ', ಡಾ.ಬಿ.ಜನಾರ್ದನ ಭಟ್ 'ಮಹೋಪಾಧ್ಯಾಯ' ಪ್ರಶಸ್ತಿಗೆ ಆಯ್ಕೆ

ವಾರ್ತಾಭಾರತಿವಾರ್ತಾಭಾರತಿ22 Aug 2017 11:04 PM IST
share
ಪ್ರೊ. ಎಂ. ರಾಮಚಂದ್ರ ವಿದ್ವತ್ ಪರಂಪರಾ ಪ್ರಶಸ್ತಿ, ಡಾ.ಬಿ.ಜನಾರ್ದನ ಭಟ್ ಮಹೋಪಾಧ್ಯಾಯ ಪ್ರಶಸ್ತಿಗೆ ಆಯ್ಕೆ

ಕಾಂತಾವರ, ಆ. 22: ಕಾಂತಾವರ ಕನ್ನಡ ಸಂಘವು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಸಿದ್ಧ ನಿಘಂಟುಕಾರ ದಿವಂಗತ ಪಂಡಿತ ಯಜ್ಞನಾರಾಯಣ ಉಡುಪ ಕುಂದಾಪುರ ಅವರ ಮಕ್ಕಳು ಸಂಘದಲ್ಲಿ ಇರಿಸಿರುವ ದತ್ತಿನಿಧಿಯಿಂದ ನೀಡುವ ವಿದ್ವತ್ ಪರಂಪರಾ ಪ್ರಶಸ್ತಿಗೆ, ಹಿರಿಯ ಸಾಹಿತಿಗಳೂ, ಸಂಘಟಕರೂ, ವಿದ್ವಾಂಸರೂ ಆಗಿರುವ ಪ್ರೊ. ಎಂ. ರಾಮಚಂದ್ರ ಅವರು ಮತ್ತು ಉಡುಪಿಯ ಪ್ರಸಿದ್ಧ ಜಾನಪದ ತಜ್ಞ ಮತ್ತು ತುಳು ನಿಘಂಟುಕಾರ ಡಾ. ಯು.ಪಿ. ಉಪಾಧ್ಯಾಯ ಅವರು ಸಂಘದಲ್ಲಿ ಇರಿಸಿರುವ ದತ್ತಿನಿಧಿಯಿಂದ ನೀಡುವ ಮಹೋಪಾಧ್ಯಾಯ ಪ್ರಶಸ್ತಿಗೆ ನಾಡಿನ ಪ್ರಮುಖ ವಿಮರ್ಶಕರಲ್ಲಿ ಒಬ್ಬರೂ, ಕಾದಂಬರಿಕಾರರೂ ಆಗಿರುವ ಡಾ. ಬಿ.ಜನಾರ್ದನ ಭಟ್ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ಅವರು ಘೋಷಿಸಿದ್ದಾರೆ.

ಪ್ರಶಸ್ತಿಯು ತಲಾ ಹತ್ತು ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು, ಇದೇ ನವಂಬರ್ 1 ರ ಸಂಜೆ ಕಾಂತಾವರದಲ್ಲಿರುವ ಕನ್ನಡಭವನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಪ್ರಕಟಿಸಿದ್ದಾರೆ.

ಪ್ರೊ. ಎಂ.ರಾಮಚಂದ್ರ
   ದ.ಕ ಜಿಲ್ಲೆ ಸುಳ್ಯ ತಾಲೂಕಿನ ಮಂಡೆಕೋಲು ಎಂಬಲ್ಲಿ ಜನಿಸಿದ (1939) ಎಂ.ರಾಮಚಂದ್ರರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಡೆಕೋಲಿನಲ್ಲಿ ಪೂರೈಸಿ ಕಾಸರಗೋಡಿನ ಬಿ.ಇ.ಎಂ. ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ನಂತರ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಬಿ.ಎ.ಪದವಿಯನ್ನು ಪಡೆದರು. ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ (1962) ಕನ್ನಡ ಉಪನ್ಯಾಸಕರಾಗಿ ನೇಮಕಗೊಂಡು ಅಲ್ಲಿಯೇ ಪ್ರವಾಚಕ, ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದವರು.

ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿದ್ದ ರಾಮಚಂದ್ರರು ನಿರಂತರವಾಗಿ ಸಾಹಿತ್ಯ ಸಂಬಂಧಿ ಲೇಖನಗಳ ರಚನೆ ಹಾಗೂ ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿದ್ದವರು. ಹವ್ಯಾಸಿ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಅವರು ಸಾಹಿತ್ಯ ಸಂಘಟನೆಗಳ ಕಾರ್ಯದಲ್ಲೂ ಮುಂಚೂಣಿಯಲ್ಲಿರುತ್ತಿದ್ದರು.

ಕಾಲೇಜಿನ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ತನ್ನ ನಿವೃತ್ತಿಯ ತನಕವೂ ಅದನ್ನು ಮುನ್ನಡೆಸಿದ ಅವರು ಇದರ ಮೂಲಕ ಶ್ರೇಷ್ಠ ಕವಿ, ಸಾಹಿತಿಗಳಾದ ಮುದ್ದಣ, ಪಂಜೆ, ಗೋವಿಂದಪೈ, ಡಿ.ವಿ.ಜಿ, ಬೇಂದ್ರೆ ಮುಂತಾದವರ ಜನ್ಮಶತಮಾನೋತ್ಸವ ಹಾಗೂ ಮಾಸ್ತಿ, ಸೇಡಿಯಾಪು, ಕಾರಂತ, ರಾಜರತ್ನಂ, ಕುವೆಂಪು ಮತ್ತಿತರರ ಸಂಸ್ಮರಣ ಸಾಹಿತ್ಯೋತ್ಸವಗಳನ್ನು ಯಶಸ್ವಿಯಾಗಿ ಸಂಯೋಜಿಸಿದ ಹಿರಿಮೆಗೆ ಪಾತ್ರರಾದವರು.

ಕಾಲೇಜಿನ ಹಾಸ್ಟೆಲ್ ವಾರ್ಡನ್ ಆಗಿ ಮತ್ತು ಅನೇಕ ಸಂದರ್ಭಗಳಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಅವರು ಕಾಲೇಜಿನ ದಶಮಾನೋತ್ಸವ, ರಜತೋತ್ಸವ ಮತ್ತು ಸುವರ್ಣಮಹೋತ್ಸವ ಕಾರ್ಯಕ್ರಮಗಳಲ್ಲದೆ ಡಾ.ಟಿ.ಎಂ.ಎ.ಪೈಯವರ ಎಂಬತ್ತನೆಯ ಹುಟ್ಟುಹಬ್ಬ, ಮಣಿಪಾಲ ಅಕಾಡೆಮಿಯ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರವನ್ನು ನಿರ್ವಹಿಸಿದವರು.

ಪ್ರಥಮ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನ ಮತ್ತು ಒಂಬತ್ತನೆಯ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರಿನಲ್ಲಿ ಜರಗಿದ ಎರಡನೆಯ ಕರ್ನಾಟಕ ಜಾನಪದ ಸಮ್ಮೇಳನದ ಕಾರ್ಯದರ್ಶಿಯಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾಗಿ ಮತ್ತು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕರ್ತರಾಗಿ ಅದರ ಯಶಸ್ಸಿಗೆ ದುಡಿದವರು.

ಕಾರ್ಕಳ ರೋಟರಿ ಕ್ಲಬ್ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಮತ್ತು ರೋಟರಿ ಗವರ್ನರ್ ಸಮೂಹ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ ಅವರು ಕಾರ್ಕಳ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕಾರ್ಕಳದ ಲಲಿತ ಕಲಾವೃಂದದ ಸ್ಥಾಪಕ ಕಾರ್ಯದರ್ಶಿಯಾಗಿ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಅವರು ಕಾರ್ಕಳ ಸಾಹಿತ್ಯ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ನಂತರ ಅದರ ಸಂಚಾಲಕರಾಗಿ ಸಾಹಿತ್ಯ ಸಂಘದ ನಿರಂತರ ವೈವಿಧ್ಯಮಯ ಕಾರ್ಯಕ್ರಮಗಳಿಂದಾಗಿ ನಾಡಿನಾದ್ಯಂತ ಪರಿಚರಾದರು.

ಸುಮಾರು ಹನ್ನೆರಡು ಸ್ವತಂತ್ರ ಕೃತಿಗಳನ್ನು ರಚಿಸಿರುವ ಅವರು ಹತ್ತಕ್ಕೂ ಮಿಕ್ಕಿದ ಕೃತಿಗಳ ಸಂಪಾದಕರಾಗಿ, ಸಹಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿರುವುದರ ಜೊತೆಗೆ ವಿವಿಧ ಪತ್ರಿಕೆಗಳಿಗೆ, ಅಭಿನಂದನ ಗ್ರಂಥಗಳಿಗೆ ಮತ್ತು ಸ್ಮರಣ ಸಂಚಿಕೆಗಳಿಗೆ ಮೌಲಿಕ ಲೇಖನಗಳನ್ನು ಒದಗಿಸಿದವರು. ಬೆಂಗಳೂರು, ಮೈಸೂರು, ಮುಂಬಯಿ, ಮದ್ರಾಸುಗಳ ವಿವಿಧ ಸಂಸ್ಥೆಗಳಲ್ಲಿ ಸಾಹಿತ್ಯೋಪನ್ಯಾಸ ನೀಡಿರುವ ಅವರ ಉಪನ್ಯಾಸ, ಚಿಂತನ ರೂಪಕಗಳು ಆಕಾಶವಾಣಿಯಲ್ಲಿಯೂ ಪ್ರಸಾರಗೊಂಡಿವೆ.

ಮಣಿಪಾಲ ಅಕಾಡೆಮಿಯ ಸುವರ್ಣ ಮಹೋತ್ಸವ ಪುರಸ್ಕಾರ, ಮಂಗಳೂರಿನ ಕೆನರಾ ಕಾಲೇಜ್ ರಜತೋತ್ಸವ ಸನ್ಮಾನ, ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಭಿನಂದನೆ, ಕಾರ್ಕಳ ತಾಲೂಕು ದ್ವೀತಿಯ ಸಾಹಿತ್ಯ ಸಮ್ಮೇಳನ ಸಮ್ಮಾನ, ಕಾರ್ಕಳ ತಾಲೂಕು ನಾಲ್ಕನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಹಾಗೂ ಅಭಿನಂದನೆ, ಕು.ಶಿ. ಅಭಿನಂದನೆ, ಸಂಸ್ಕಾರ ಭಾರತಿ ರಜತೋತ್ಸವ ಪುರಸ್ಕಾರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಮ್ಮಾನ, ಏರ್ಯಬೀಡು ಪ್ರತಿಷ್ಠಾನದ ಸಾಹಿತ್ಯ ಕಲಾರಾಧಕ ಪ್ರಶಸ್ತಿ, ಎಸ್.ವಿ.ಪಿ. ಸಂಸ್ಮರಣಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಪೇಜಾವರ ಮಠದ ಶ್ರೀ ರಾಮವಿಠಲ ಪ್ರಶಸ್ತಿಗಳಲ್ಲದೆ ಇತರ ಹತ್ತಾರು ಪುರಸ್ಕಾರ, ಸನ್ಮಾನಗಳಿಗೆ ಭಾಜನರಾದವರು.

ಡಾ. ಬಿ.ಜನಾರ್ದನ ಭಟ್

ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬೆಳ್ಮಣ್ಣಿನ ಡಾ.ಬಿ.ಜನಾರ್ದನ ಭಟ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಮತ್ತು ಕನ್ನಡದಲ್ಲಿಯೂ ಸ್ನಾತಕೋತ್ತರ ಪದವಿಗಳನ್ನು ಹಾಗೂ ಸಿ.ಐ.ಇ.ಎಫ್.ಎಲ್‌ನಿಂದ ಪಿ.ಜಿ.ಡಿ.ಟಿ.ಇ ಪದವಿ ಪಡೆದ ನಂತರ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದವರು.

ಇಂಗ್ಲೀಷ್ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಪ್ರಸ್ತುತ ಸರಕಾರಿ ಪ.ಪೂ ಕಾಲೇಜು, ಬೆಳ್ಮಣ್ಣು ಇಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯನಿರತರಾಗಿದ್ದಾರೆ.

ಹತ್ತನೆಯ ತರಗತಿಯಲ್ಲಿರುವಾಗಲೇ ಇವರು ಬರೆದ ಸಣ್ಣಕತೆ 'ಪೋಲಿಸರು' ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅವರು ಈಗಾಗಲೇ ಐದು ಕಾದಂಬರಿ, ಮೂರು ಕಥಾಸಂಕಲನಗಳು, 23 ಸಾಹಿತ್ಯ ವಿಮರ್ಶೆಯ ಕೃತಿಗಳ ಸಹಿತ ಅನೇಕ ಮಹತ್ವದ ಸಂಪಾದಿತ ಗ್ರಂಥಗಳು ಸೇರಿದಂತೆ ಒಟ್ಟು 61 ಕೃತಿಗಳನ್ನು ಪ್ರಕಟಿಸಿದ್ದಾರೆ.

ಕನ್ನಡದ ಮುಖ್ಯ ಅನುವಾದಕರಲ್ಲಿ ಒಬ್ಬರಾಗಿ ಜಾಗತಿಕ ಸಾಹಿತ್ಯದ ಕೆಲವು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದು ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಸಂಪಾದಕರಾಗಿ ನೂರು ಕೃತಿಗಳನ್ನು ಸಂಪಾದಿಸಿ ಅದನ್ನು ಮುಂದುವರಿಸುತ್ತಿರುವ ಹೆಗ್ಗಳಿಕೆ ಅವರದು.

ಉದಯವಾಣಿ, ಮುಂಗಾರು, ಹೊಸದಿಗಂತ, ಕನ್ನಡಪ್ರಭ, ಕನ್ನಡಜನ ಅಂತರಂಗ ಮತ್ತು ತರಂಗ ಪತ್ರಿಕೆಗಳಿಗೆ ಆಗಾಗ ಪುಸ್ತಕ ವಿಮರ್ಶೆಗಳನ್ನು ಬರೆದಿರುವ ಅವರು ಸದ್ಯ ಪ್ರಜಾವಾಣಿ ಪತ್ರಿಕೆಯಲ್ಲಿ ಪುಸ್ತಕ ಸಮೀಕ್ಷೆ ಬರೆಯುತ್ತಿದ್ದಾರೆ. ವಿವಿಧ ಪತ್ರಿಕೆಗಳ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದ ಅವರ ಭಾಷಣ, ಚಿಂತನ, ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡ ಹದಿನೈದು ರೂಪಕಗಳ ಮಾಲಿಕೆ ಕಡಲ ತಡಿಯ ಕೋವಿದರು ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟಿದೆ.

2008ರಲ್ಲಿ ಇವರ ಹಸ್ತಾಂತರಕಾದಂಬರಿ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ಪ್ರಶಸ್ತಿಗೆ ಭಾಜನವಾಗಿದ್ದರೆ. ಉತ್ತರಾಧಿಕಾರಕಾದಂಬರಿಯು 2012ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು 2016ರಲ್ಲಿ ಮೂರು ಹೆಜ್ಜೆಭೂಮಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಭಾರತೀಸುತ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2016ರಲ್ಲಿ ಕಲ್ಲು ಕಂಬವೇರಿದ ಹುಂಬಮಿನಿ ಕಾದಂಬರಿ ತರಂಗ ಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ.

ರಾಜ್ಯಮಟ್ಟದ ಸಣ್ಣ ಕತೆಗಳ ಸ್ಪರ್ಧೆಗಳಲ್ಲಿ ಏಳು ಬಾರಿ ಬಹುಮಾನ ಪಡೆದಿರುತ್ತಾರೆ. 2012ರಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಕನ್ನಡ ಸಿಂಹ ಪ್ರಶಸ್ತಿ ಮತ್ತು 2015ರಲ್ಲಿ ಮುಂಬೈಯ ಪ್ರೊ.ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿಯೂ ಇವರ ಸಾಧನೆಯ ಮುಡಿಗೇರಿದ್ದು ಇವರ ಬದುಕು ಭಾವದ ಕತೆಗಳು ಕೃತಿಯು ಮಂಗಳೂರು ವಿಶ್ವವಿದ್ಯಾನಿಲಯದ ದ್ವೀತಿಯ ಪದವಿ ತರಗತಿಗಳಿಗೆ ಪಠ್ಯವಾಗಿತ್ತು.

ಆಂಗ್ಲಭಾಷಾ ಬೋಧಕರಾದರೂ ಕನ್ನಡದ ಸೃಜನಶೀಲ ಸಾಹಿತಿಯಾಗಿ, ಸಾಹಿತ್ಯಲೋಕ ಗಮನಿಸುವ ವಿಮರ್ಶಕರಾಗಿ ಅಧ್ಯಯನಶೀಲ ಗ್ರಂಥಗಳ ಸಂಪಾದಕರಾಗಿ ತಮ್ಮ ಛಾಪನ್ನು ಮೂಡಿಸಿರುವ ಡಾ.ಜನಾರ್ದನ ಭಟ್ಟರು ವಿದ್ವತ್ತಿನೊಂದಿಗೆ ಸರಳತೆ ಮತ್ತು ಸಜ್ಜನಿಕೆಯನ್ನೂ ಮೈಗೂಡಿಸಿಕೊಂಡಿರುವ ಅಪರೂಪದ ಮಾನವತಾವಾದಿಯಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X