13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಣಕಾಸಿನ ದುರ್ಬಳಕೆ ನಡೆದಿಲ್ಲ: ಕುಂದೂರು ಅಶೋಕ್

ಚಿಕ್ಕಮಗಳೂರು, ಆ.23: ಕಳೆದ ಸಲ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಕಸಾಪ ಬಾರೀ ಪ್ರಮಣದ ಭ್ರಷ್ಟಾಚಾರ ನಡೆಸಿದದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸ್ವಾಗತ ಸಮಿತಿಯು ಸಾರ್ವಜನಿಕರಿಂದ 7.19 ಲಕ್ಷ ರೂ.ಗಳ ವಂತಿಗೆಯನ್ನು ಸಂಗ್ರಹಿಸಿದೆ. ಕೇಂದ್ರ ಸಕಾಸದಿಂದ ಲಕ್ಷ ರೂ.ಗಳ ಅನುದಾನ ಬಂಧಿದ್ದು, ಒಟ್ಟು 12.19 ಲಕ್ಷ ರೂ.ಗಳನ್ನು ಖಾತೆಗೆ ಜಮೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 12.11 ಲಕ್ಷ ರೂ.ಗಳು ಸಮ್ಮೇಳನದ ವೆಚ್ಚವಾಗಿದೆ. ಆದರೆ ಈ ಸಮ್ಮೇಳನದ ಕುರಿತು ಅನಾಮದೇಯ ಪತ್ರವನ್ನು ಹಿಡಿದು ಸಮ್ಮೇಳನದಲ್ಲಿ 7 ಲಕ್ಷ ರೂ.ಗಳ ದುರುಪಯೋಗ ನಡೆದಿರುವ ಆರೋಪದಲ್ಲಿ ಉರುಳಿಲ್ಲ ಎಂದು ವಿವರ ನೀಡಿದರು.
ಒಟ್ಟು ಸಂಗ್ರಹವಾಗಿರುವ 12.19 ಲಕ್ಷ ರೂ.ಗಳಲ್ಲಿ 7 ಲಕ್ಷದಷ್ಟು ದುರುಪಯೋಗ ಮಾಡಿಕೊಂಡರೆ ಜಿಲ್ಲಾ ಮಟ್ಟದ ಸಮ್ಮೆಳನ ನಡೆಸಲು ಸಾದ್ಯವೇ ಎಂದು ಪ್ರಶ್ನಿಸಿದ ಅವರು, ಶಾಮಿಯಾನ ಮತ್ತು ಪ್ರಿಂಟಿಂಗ್ ಪ್ರೆಸ್‍ಗೆ 5 ಲಕ್ಷ ನೀಡಿದ್ದಾಗಿ ವದಂತಿ ಹಬ್ಬಿಸಿದ್ದು ಸತ್ಯಕ್ಕೆ ದೂರವಾದ ಕಟ್ಟುಕತೆಯಾಗಿದೆ.
ಶಾಮಿಯಾನ, ಸೌಂಡ್ ಸಿಸ್ಟಂ, ಲೈಟಿಂಗ್ಸ್ ಸಹಿತ ವಿಶೇಷ ಆಸನ ವ್ಯವಸ್ಥೆಗಳ ಸಹಿತ ಸ್ಮರಣ ಸಂಚಿಕೆ, 10500 ಆಹ್ವಾನ ಪತ್ರಿಕೆಗಳು, ಕಾಡ್ಸ್, ಲೆಟರ್ ಹೆಡ್ಸ್, ಕರಪತ್ರಗಳು ಮತ್ತು ಕೂಪನಗಳಿಗೆ ಒಟ್ಟಾರೆ 4.51 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತದಿಂದ 1 ದಿನದ ಊಟದ ವ್ಯವಸ್ಥೆಯನ್ನು ಮಾಡಿದೆ. ಕೆಎಸ್‍ಆರ್‍ಟಿಸಿ ನೌಕರರು 100 ಸ್ಮರಣಿಕೆಗಳನ್ನು ಕೊಡುಗೆ ರೂಪದಲ್ಲಿ ನೀಡಿದ್ದಾರೆ. ಸಿಡಿಎಯಿಂದ ಪ್ರದಾನ ವೇದಿಕೆಯ ಪ್ಲೆಕ್ಸ್ ಮತ್ತು ಅಲಂಕಾರ ವೆಚ್ಚ ಭರಿಸಿದ್ದಾರೆ. ಉಳಿದ ಎಲ್ಲಾ ಖರ್ಚು ವೆಚ್ಚಗಳನ್ನು ಸ್ವಾಗತ ಸಮಿತಿ ಸಂಗ್ರಹಿಸಿದ ಹಣದಲ್ಲಿ ಭರಿಸಲಾಗಿದೆ. ಈ ಅವಧಿಯಲ್ಲಿ ಶಾಮಿಯಾನ ಅಥವಾ ಇನ್ನಿತರೆ ಬಾಬ್ತುಗಳಲ್ಲಿ ಯಾವುದೇ ಹಣಕಾಸಿನ ದುರ್ಬಳಕೆ ನಡೆದಿಲ್ಲ ಎಂದು ಮಾಹಿತಿ ನೀಡಿದರು.
10ನೇ ಜಿಲ್ಲಾ ಸಮ್ಮೆಳನಕ್ಕೆ 22 ಲಕ್ಷ, 11ನೇ ಜಿಲ್ಲಾ ಸಮ್ಮೇಳನಕ್ಕೆ 18 ಲಕ್ಷ, 12ನೇ ಜಿಲ್ಲಾ ಸಮ್ಮೆಳನಕ್ಕೆ 14.0 ಲಕ್ಷ ರೂ.ಗಳ ವೆಚ್ಚ ಹಾಗೂಈ 2.5- ಲಕ್ಷ ರೂ.ಗಳನ್ನು ಭವನಕ್ಕೆ ನೀಡಲಾಗಿದೆ. 13ನೇ ಜಿಲ್ಲಾ ಸಮ್ಮೇಳನಕ್ಕೆ 12.11 ಲಕ್ಷ ರೂ.ಗಳನ್ನು ಮಾತ್ರ ವೆಚ್ಚಮಾಡಲಾಗಿದೆ. ಈ ಅಂಶವನ್ನು ಗಮನಿಸಿದರೆ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಸರಳವು. ಮಿತವ್ಯಯದಿಂದ ಕೂಡಿದೆ. ಸಮ್ಮೇಳನವನ್ನು ಸವಾಗತ ಸಮಿತಿಯು ಅತ್ಯಂತ ಪಾರದರ್ಶಕವಾಗಿ ನಡೆಸಿದೆ ಎಂದು ನುಡಿದರು.
ಈ ಸಮಯದಲ್ಲಿ ಚಿಕ್ಕಮಗಳೂರು ತಾಲೂಕು ಕಸಾಪ ಅಧ್ಯಕ್ಷ ಪುಟ್ಟಸ್ವಾಮಿ ಮತ್ತಿತರರಿದ್ದರು.







