ಹನೂರು: ಹೊಸ ಬಡವಾಣೆಯ ಚರಂಡಿಯಲ್ಲಿ ಕಲ್ಮಶ ನೀರು

ಹನೂರು, ಆ. 23: ಹನೂರು ಪಟ್ಟಣದ ಮುಖ್ಯ ರಸ್ತೆಯ ಚೆಸ್ಕಾಂ ಕಚೇರಿಯ ಮುಂಭಾಗದಲ್ಲಿರುವ ಹೊಸ ಬಡವಾಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಚರಂಡಿಯಲ್ಲಿ ಕಲ್ಮಶ ನೀರು ತುಂಬಿ ತುಳುಕುತ್ತಿದ್ದು ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಸಹ ಸ್ಥಳೀಯ ಪಟ್ಟಣ ಪಂಚಾಯತಿ ಆಡಳಿತ ವರ್ಗ ನಮ್ಮ ಬಡವಾಣೆಯಲ್ಲಿ ಕೊಳಚಿ ನೀರಿನಿಂದ ಮುಕ್ತಿ ಗೂಳಿಸಲು ವಿಫಲವಾಗಿದ್ದಾರೆ ಎಂದು ಸ್ದಳಿಯ ನಿವಾಸಿಗಳು ಆರೋಪಿಸಿದ್ದಾರೆ .
ಪಟ್ಟಣದ ಮುಖ್ಯ ರಸ್ತೆಯ ಚೆಸ್ಕಾಂ ಕಚೇರಿಯ ಬಳಿ ಇರುವ ಹೊಸ ಬಡವಾಣೆಯಲ್ಲಿ ನೂತನ ಚರಂಡಿಯನ್ನು ನಿರ್ಮಾಣ ಮಾಡಿರುವುದು ಸರಿಯಷ್ಟೆ .ಅದರ ಸರಿಯಾದ ನಿರ್ವಹಣೆಯಿಲ್ಲದೇ ಕಳೆದ ವಾರ ಸತತವಾಗಿ ಬಿದ್ದ ಮಳೆಗೆ ನೀರು ತಂಬಿ ತುಳುಕುತ್ತಿದ್ದು . ಆ ನೀರು ಕೋಳಚೆ ನೀರಾಗಿ ಕಲ್ಮಶವಾಗಿದೆ ಹಾಗೂ ವೃದ್ದರು ಮಕ್ಕಳು ರಾತ್ರಿಯ ವೇಳೆ ಸಂಚರಿಸಲು ಹೆದರುವಂತಾಗಿದೆ . ಈ ಚರಂಡಿಯಲ್ಲಿರುವ ನೀರನ್ನು ವೀಲೆವಾರಿ ಮಾಡಲು ಕ್ರಮವಹಿಸದ ಇರುವ ಕಾರಣ ಇಲ್ಲಿನ ನಿವಾಸಿಗಳು ರೋಗ ರುಜಿನಗಳು ತುತ್ತಾಗುವಭೀತಿಯಲ್ಲಿದ್ದಾರೆ ಈ ಚರಂಡಿಯಲ್ಲಿ ನೂರಾರು ಸೂಳ್ಳೆಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ . ಎಂದು ಈ ಬಗ್ಗೆ ಹಲವು ದಿನಗಳಿಂದ ಪಟ್ಟಣ ಪಂಚಾಯತಿಯ ಆಡಳಿತ ವರ್ಗದ ಗಮನಕ್ಕೆ ತಂದರೂ ಸಹ ಈ ಅವ್ಯವಸ್ಥೆಯನ್ನು ಸರಿದೂಗಿಸಲು ಇನ್ನೂ ಸಹ ಇದರ ಬಗ್ಗೆ ಗಮನಹರಿಸಿ ಮುಂದಾಗಿಲ್ಲ ಎಂದು ಇಲ್ಲಿನ ನಿವಾಸಿಗಳಾದ ಬಸವರಾಜು ,ಗೊವಿಂದೆಗೌಡ ಆರೋಪಿಸಿದ್ದಾರೆ ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.





