ಹನೂರು: ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ ಸ್ಪರ್ದೆ

ಹನೂರು, ಆ. 23: ಸ್ವಚ್ಚ ಭಾರತ, ವಿಜ್ಞಾನ ತಂತ್ರಜ್ಞಾನಗಳ ಪಾತ್ರ ಸವಾಲುಗಳು ಎಂಬ ವಿಷಯದ ಬಗ್ಗೆ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಡಯಟ್ ಚಾಮರಾಜನಗರ ಮತು ಸಮನ್ವಯ ಸಂಪನ್ಮೂಲ ಅಧಿಕಾರಿಗಳು ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ ಸ್ಪರ್ದೆಯನ್ನು ಆಯೋಜಿಸಲಾಗಿತ್ತು .
ಈ ವಿಚಾರಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಡಯಟ್ ಉಪನ್ಯಾಸಕರಾದ ರಾಮಶೆಟ್ಟಿ ಮಕ್ಕಳಲ್ಲಿ ವೈಜ್ಞಾನಿಕ ಚಿಂತೆಗಳನ್ನು ರೂಡಿಸಿಕೂಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗ್ಗತ್ತಿದ್ದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳವುದ್ದರಿಂದ ಮೂಡನಂಬಿಕೆ ದೂರವಾಗಿ ಮಕ್ಕಳಲ್ಲಿ ನೈಜಸ್ಥಿತಿಯ ಅರಿವು ನಿರ್ಮಾಣವಾಗುತ್ತದೆ . ಪ್ರತಿ ಗ್ರಾಮದಲ್ಲೂ ಸ್ವಚ್ಚತೆ ಹಾಗೂ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲೆಯ ಮಕ್ಕಳಿಂದನೇ ಸಾದ್ಯ ಏಕೆಂದರೆ ಪ್ರತಿ ಗ್ರಾಮದಲ್ಲಿರುವ ನಿಕಟವಾದ ಸ್ಥಳ ಯಾವುದೆಂದರೇ ಅದು ಶಾಲೆ ಯಾಗಿರುತ್ತದೆ . ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲೆಯ ಮಕ್ಕಳು ಪ್ರಮುಖ ಪಾತ್ರ ವಹಿಸುತ್ತಾರೆ , ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಹಾಗೂ ಪೋಷಕರ ಸಭೆಯನ್ನು ಕರೆವುದರ ಮೂಲಕ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದ್ದರಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ನಿಮ್ಮ ಶಾಲಾ ಆವರಣ ನಿಮ್ಮ ಮನೆಗಳಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚು ಒತ್ತನ್ನು ಕೂಡಬಹುದಾಗಿರುತ್ತದೆ ಎಂದು ತಿಳಿಸಿದರು .
ಇಂದಿನ .ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ನಾಟಕ ಸ್ಪರ್ದೆಯ ಕಾರ್ಯಕ್ರಮದಲ್ಲಿ 7 ಶಾಲೆಯ 60ಕ್ಕಿಂತಲ್ಲೂ ಹೆಚ್ಚು ವಿದ್ಯಾರ್ಥಿಗಳು ಬಾಗವಹಿಸಿದ್ದರು.
ಈ ವಿಚಾರ ಗೋಷ್ಠಿಯಲ್ಲಿ ಪ್ರಥಮ ಸ್ಥಾ£ವನ್ನು ಪಡೆದ ಮಣಗಳ್ಳಿ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು
ದ್ವೀತಿಯ ಸ್ಥಾನವನ್ನು ಪಡೆದ ಕ್ರಿಸ್ತರಾಜ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ತೃತಿಯ ಸ್ಥಾನ ಪಡೆದ ಚೆನ್ನಾಲಿಂಗನಹಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಈ ಸಮಾರಂಭದಲ್ಲಿ ಬಿ ಆರ್ ಸಿ ಕಾರ್ತಿಕ್, ಬಿಆರ್‍ಪಿ ಗಳಾದ ಆಶೋಕ್ ಶ್ರೀನಿವಾಸ್ ನಾಯ್ಡು, ತಿರ್ಪುಗಾರರಾಗಿ ಗಿರೀಶ್ ಆನಂದ್‍ರವರು ಹಾಗೂ ವಿವಿಧ ಶಾಲೆಯ ಶಿಕ್ಷಕರು ಹಾಜರಿದ್ದರು.







