ವ್ಯಾಪಾರಿಗಳಿಂದ ತೂಕದಲ್ಲಿ ಮೋಸ: ಸೂಕ್ತ ಕ್ರಮಕ್ಕೆ ಆಗ್ರಹ

ಉಡುಪಿ, ಆ. 23: ನಗರದ ರಸ್ತೆ ಬದಿಗಳಲ್ಲಿ ತಳ್ಳು ಗಾಡಿಯಲ್ಲಿ ಹಣ್ಣು ಹಂಪಲು ವ್ಯಾಪಾರ ಮಾಡುವ ಕೆಲವು ವ್ಯಾಪರಸ್ಥರು ಗ್ರಾಹಕರಿಗೆ ತೂಕದಲ್ಲಿ ಮೋಸ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆಯೆಂದು ಸಾರ್ವಜನಿಕರು ದೂರಿದ್ದಾರೆ.
ತಕ್ಕಡಿಯ ಸಾಮಗ್ರಿ ಹಾಕುವ ತಟ್ಟೆಯಲ್ಲಿ, ಗ್ರಾಹಕರಿಗೆ ಕಾಣದ ರೀತಿಯಲ್ಲಿ ಪ್ಲಾಷ್ಟಿಕ್ ಚೀಲದಲ್ಲಿ ಸೇಬು ಹಣ್ಣನ್ನು ಕಟ್ಟಿರುತ್ತಾರೆ. ಇದರಿಂದ ತೂಕದಲ್ಲಿ ಮೋಸ ಮಾಡುತ್ತಿರುವುದಾಗಿ ಗ್ರಾಹಕರು ದೂರಿದ್ದಾರೆ.
ಈಗ ಹಬ್ಬಗಳ ಸಂದರ್ಭವಾದುದರಿಂದ ಹಣ್ಣು ಹಂಪಲಿಗೆ ಬೇಡಿಕೆಯೂ ಹೆಚ್ಚಿದೆ. ಈ ರೀತಿಯ ಮೋಸದ ವ್ಯಾಪಾರ ನಗರದಲ್ಲಿ ಹೆಚ್ಚಿನ ತಳ್ಳು ಗಾಡಿಗಳಲ್ಲಿ ನಡೆಯಬಹುದೆನ್ನುವ ಸಂಶಯ ಗ್ರಾಹಕರಲ್ಲಿ ಮೂಡಿದೆ. ಹಾಗಾಗಿ ಆಹಾರ ಇಲಾಖೆ ತೂಕ ವಂಚಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ವ್ಯಾಪಾರಿಗಳ ತೂಕದ ಯಂತ್ರವನ್ನು ತಪಾಸಣೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
Next Story





