ಸ್ನೇಹಿತನ ಇರಿದು ಕೊಲೆ
ಶಿರಾ, ಆ. 23: ಕುಡಿದ ಮತ್ತಿನಲ್ಲಿ ಹಳೆಯ ದ್ವೇಷವನ್ನೇ ಮುಂದಿಟ್ಟುಕೊಂಡು ಸ್ನೇಹಿತನನ್ನು ಚಾಕುವಿನಂದ ತಿವಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಶಿರಾ ನಗರದ ಬೇಗಂ ಮೊಹಲ್ಲಾ ದರ್ಗಾದ ಸರ್ಕಲ್‌ನಲ್ಲಿ ನಡೆದಿದೆ.
ಫಯಾಝ್ ಮತ್ತು ಅಲ್ಲಾವುದ್ದೀನ್ ಎಂಬವರ ನಡುವೆ ಜಗಳ ನಡೆದಿದೆ. ಅದೇ ಸಮಯಕ್ಕೆ ಜಗಳ ಬಿಡಿಸಲು ಬಂದ ಸೈಯದ್ ಸಾದಿಕ್‌ಗೆ ಅಲ್ಲಾವುದ್ದೀನ್ ತನ್ನ ಬಳಿ ಇದ್ದ ಚಾಕುವಿನಿಂದ ಮನ ಬಂದಂತೆ ಎದೆ ಹಾಗೂ ಹೊಟ್ಟೆ ಭಾಗಕ್ಕೆ ತಿವಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸೈಯದ್ ಸಾದಿಕ್‌ನನ್ನು ಕೂಡಲೆ ಶಿರಾ ಸರಕಾರಿ ಅಸ್ಪತ್ರೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟದ್ದಾರೆ. ವಿಷಯ ತಿಳಿದ ಶಿರಾ ಗ್ರಾಮಾಂತರ ಡಿವೈಎಸ್ಪಿ ವೆಂಕಟೇಶನಾಯ್ಡು ವೃತ್ತ ನಿರೀಕ್ಷಕ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Next Story





