ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಸೆರೆ
ಪುತ್ತೂರು, ಆ. 23: ಕಾಲೇಜು ವಿದ್ಯಾರ್ಥಿನಿಯೋರ್ವಳ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆಯೊಂದು ಪುತ್ತೂರು ನಗರದ ಹೊರವಲಯದ ನರಿಮೊಗ್ರು ಗ್ರಾಮದ ಮುಕ್ವೆ ಸಮೀಪದ ಮಣಿಯ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ನರಿಮೊಗ್ರು ಗ್ರಾಮದ ಮುಕ್ವೆ ಸಮೀಪದ ಮಣಿಯ ನಿವಾಸಿ ಜಕಾರಿಯಾ (23) ಬಂಧಿತ ಆರೋಪಿ.
ಪುತ್ತೂರಿನ ಪದವಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮಂಗಳವಾರ ಸಂಜೆ ಕಾಲೇಜು ಬಿಟ್ಟು ಮನೆಗೆ ತೆರಳುತಿದ್ದ ವೇಳೆ ಆರೋಪಿ ಜಕಾರಿಯಾ ತನ್ನ ಮೊಬೈಲ್ ನಂಬ್ರ ನಮೂದಿಸಿದ ಚೀಟಿ ಮತ್ತು ರೂ.100 ರ ನೋಟನ್ನು ಕಾಗದವೊಂದರಲ್ಲಿ ಸುತ್ತಿ ನೀಡಿ, ಆಕೆಯ ಕೈ ಹಿಡಿದು ಎಳೆದಿರುವುದಾಗಿ ಆರೋಪಿಸಲಾಗಿದೆ.
ಘಟನೆಯ ಕುರಿತು ವಿದ್ಯಾರ್ಥಿಯ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಮಂಗಳವಾರ ರಾತ್ರಿ ಬಂಧಿಸಿ, ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Next Story





