ಅಂತರ್ ಕಾಲೇಜು ಸಂಗೀತ ಸ್ಪರ್ಧೆ: ಆಳ್ವಾಸ್ಗೆ ಸಮಗ್ರ ಪ್ರಶಸ್ತಿ
ಮೂಡುಬಿದಿರೆ, ಆ. 24: ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆದ ‘ಫಿಲೋ ನಿನಾದ’- ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವೈಯಕ್ತಿಕ ವಿಭಾಗದ ಲಘು ಸಂಗೀತದಲ್ಲಿ ಆಳ್ವಾಸ್ನ ವರ್ಷಾ ಆಚಾರ್ಯ ಪ್ರಥಮ ತಾಳವಾದ್ಯದಲ್ಲಿ ರಮೇಶ್ ರಾಥೋಡ್ ಪ್ರಥಮ, ಪಾಶ್ಚತ್ಯ ಸಂಗೀತದಲ್ಲಿ ಚಾರ್ಲ್ಸ್ ದ್ವಿತೀಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೃಷ್ಣ ಸುತ್ತಾರ್ ತೃತೀಯ ಸ್ಥಾನಿಯಾಗಿದ್ದಾರೆ.
ಭಾರತೀಯ ಸಮೂಹ ಗಾಯನ, ಪಾಶ್ಚತ್ಯ ಸಮೂಹ ಗಾಯನ ಹಾಗೂ ಜಾನಪದ ವಾದ್ಯಗೋಷ್ಠಿಯಲ್ಲಿ ಆಳ್ವಾಸ್ ತಂಡವು ಪ್ರಥಮ ಸ್ಥಾನಿಯಾಗುವುದರ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ
Next Story