ಸ್ಕೂಟರ್‌ಗೆ ಲಾರಿ ಢಿಕ್ಕಿ: ಓರ್ವ ಮೃತ್ಯು

ಬೆಂಗಳೂರು, ಆ.24: ಹಿಂದಿನಿಂದ ಬಂದ ಲಾರಿಯೊಂದು ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿ.ಕೆ.ನಗರದ ರಾಜು ಮೈಲಾಪಲ್ಲಿ(22) ಮೃತಪಟ್ಟ ಮೀನು ವ್ಯಾಪಾರಿ ಎಂದು ಪೊಲೀಸರು ಗುರುತಿಸಿದ್ದಾರೆ.
ಮನೆಯಿಂದ ಹೋಂಡಾ ಸ್ಕೂಟರ್‌ನಲ್ಲಿ ಹತ್ತಿರದ ಸ್ನೇಹಿತನ ಮನೆಗೆ ಹೊರಟ ರಾಜು, ಚೌಡೇಶ್ವರಿ ನಿಲ್ದಾಣದಿಂದ ರೈಲು ನಿಲ್ದಾಣದ ಕಡೆ ಹೋಗುವಾಗ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬುಧವಾರ ರಾತ್ರಿ 7:30ರ ವೇಳೆ ನಡೆದ ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜು ಮೈಲಾಪಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾಜು ಮೈಲಾಪಲ್ಲಿ, ಯಶವಂತಪುರ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದರು. ಪ್ರಕರಣ ದಾಖಲಿಸಿರುವ ಯಶವಂತಪುರ ಸಂಚಾರ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





