ಕನ್ನಗುಡ್ಡೆ ಅಳಪೆ ಅಂಗನವಾಡಿ ಕಟ್ಟಡ ಉದ್ಘಾಟನೆ

ಮಂಗಳೂರು, ಆ.24: ಕನ್ನಗುಡ್ಡೆಯಲ್ಲಿ ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಎಂಆರ್‌ಪಿಎಲ್ ಸಹಭಾಗಿತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕಾರ್ಪೊರೇಟರ್ ಬಿ.ಪ್ರಕಾಶ್, ಮಾಜಿ ಮೇಯರ್ ಕೃಷ್ಣಪ್ಪಮೆಂಡನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಭೂನ್ಯಾಯ ಮಂಡಳಿ ಸದಸ್ಯ ಡೆನ್ನಿಸ್ ಡಿಸಿಲ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ್‌ಪೂಜಾರಿ, ವೈದ್ಯನಾಥ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಶಂಕರ್ ನಾಯ್ಕ್, ಅಶೋಕ್ ಕಿರೋಡಿಯನ್, ಉಮೇಶ್ ನೂಜಿ, ಪ್ರಭಾಕರ್ ಶ್ರೀಯಾನ್, ಸದಾಶಿವ ಅಮೀನ್, ದುರ್ಗಾ ಪ್ರಸಾದ್, ನೆಲ್ಸನ್ ಮೊಂತೆರೊ ಉಪಸ್ಥಿತರಿದ್ದರು.
Next Story





