ಆ.28: ಮಂಗಳೂರಿನಲ್ಲಿ ಪಾದಯಾತ್ರೆ
ಮಂಗಳೂರು, ಆ.24: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ನಿರಂತರವಾಗಿ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಚುನಾವಣಾ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸಿಪಿಎಂ ನೇತೃತ್ವದಲ್ಲಿ ಸೆಪ್ಟೆಂಬರ್ 15ರವರೆಗೆ ದೇಶಾದ್ಯಂತ ಜನಾಂದೋಲನ ನಡೆಯಲಿದೆ. ಅದರ ಭಾಗವಾಗಿ ಆ.28ರಂದು ಮಂಗಳೂರು ನಗರಾದ್ಯಂತ ಪಾದಯಾತ್ರೆ ನಡೆಸಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಪಿಎಂ ರಾಜ್ಯ ನಾಯಕ ಜೆ. ಬಾಲಕೃಷ್ಣ ಶೆಟ್ಟಿ ಪಾದಯಾತ್ರೆ ಉದ್ಘಾಟಿಸಲಿದ್ದು, ಸಂಜೆ 6 ಗಂಟೆಗೆ ನಗರದ ಪುರಭವನದ ಬಳಿ ಸಮಾರೋಪಗೊಳ್ಳಲಿದೆ. ಸಿಪಿಎ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





