ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮದಲ್ಲಿ ಪರೀಕ್ಷೆ
ಬೆಂಗಳೂರು, ಆ.24: ದ್ವಿತೀಯ ಪಿಯುಸಿಯ ಹಳೆ ಪಠ್ಯಕ್ರಮದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಪಿಸಿಎಂಬಿ(ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವ ವಿಜ್ಞಾನ) ವಿಷಯದ ವಿದ್ಯಾರ್ಥಿಗಳು 2018ರ ವಾರ್ಷಿಕ ಪರೀಕ್ಷೆಯನ್ನು ಹೊಸ ಪಠ್ಯಕ್ರಮದಲ್ಲಿಯೇ ಬರೆಯಬೇಕು.
ಪಿಸಿಎಂಬಿ ಬಿಟ್ಟು ಉಳಿದ ವಿಷಯಗಳಾದ ಕಲಾ, ವಾಣಿಜ್ಯ, ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಇಲೆಕ್ಟ್ರಾನಿಕ್ಸ್ ಪರೀಕ್ಷೆಗಳನ್ನು ಹಳೆಯ ಪಠ್ಯಕ್ರಮದಲ್ಲಿಯೇ ಬರೆಯಲು ಅವಕಾಶ ನೀಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Next Story





