ಕಡೂರು: ರಾಜ್ಯ ಸರಕಾರದ ವಿರುದ್ಧ ಪಂಜಿನ ಮೆರವಣಿಗೆ

ಕಡೂರು, ಆ. 24: ರಾಜ್ಯ ಸರ್ಕಾರದ ದುರಾಡಳಿತ ಮತ್ತು ದ್ವೇಷದ ರಾಜಕಾರಣದ ವಿರುದ್ಧ ಕಡೂರು ಬಿಜೆಪಿ ಅಧ್ಯಕ್ಷ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಅಧ್ಯಕ್ಷ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಹೊರಟ ಕಾರ್ಯಕರ್ತರು ಕೆ.ಎಲ್.ವಿ. ವೃತ್ತದವರೆಗೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಧಿಕ್ಕಾರ ಕೂಗಿದರು.
ಈ ವೇಳೆ ಬೆಳ್ಳಿಪ್ರಕಾಶ್ ಮಾತನಾಡಿ, ಸೋನಿಯ ಎಂಬ ಡ್ರೀಮ್ ವಿಶ್ವ ವಿದ್ಯಾನಿಲಯಯಲ್ಲಿ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ತಯಾರಿಸಿ ನಿಮ್ಮದೆ ಸಮೀಕ್ಷೆ ನಡೆಸಿ ನೀವೆ ಮಾಕ್ರ್ಸ್ ಹಾಕಿಕೊಂಡು ಜನರನ್ನು ನಂಬಿಸುವ ಕೆಲಸವನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಮೊದಲು ಇಂತಹ ಕೆಲಸವನ್ನು ಬಿಡಿ ಎಂದು ಸಿ. ಫೋರ್ ಸಮೀಕ್ಷೆ ಕುರಿತು ವ್ಯಂಗ್ಯವಾಡಿದರು.
ದೇಶದ ರಾಜಕಾರಣ ನಿಮಗೆ ಬೇಕಿಲ್ಲ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುವುದನ್ನು ಕಲಿಯಿರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರಗಾಲದಿಂದ ಜನ ಜಾನುವಾರುಗಳು ತತ್ತರಿಸುತ್ತಿದ್ದು, ನೀವು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಿ.ಫೋರ್ ಸಮೀಕ್ಷೆಯ ಮೊರೆ ಹೋಗಿರುವುದು ದುರದೃಷ್ಠಕರ ಇಂತಹ ಮುಖ್ಯಮಂತ್ರಿಗಳನ್ನು ಪಡೆದಿರುವುದೆ ನಮ್ಮ ದುರ್ದೈವ್ಯವಾಗಿದೆ ಎಂದರು.
ಸಿ.ಫೋರ್ ಸಂಸ್ಥೆಯ ಮುಖ್ಯಸ್ಥ ಪ್ರೇಮಕುಮಾರ್ ಅವರೊಂದಿಗೆ ತಾವು ಸೇರಿದಂತೆ ಸಂಸದ ಪ್ರಕಾಶ ಹುಕ್ಕೇರಿ, ಡಾ. ಪರಮೇಶ್ವರ ಅವರೊಂದಿಗೆ ಔತಣಕೂಟ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮತ್ತು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ದಿನೇಶ್ ಅಮೀನ ಮಟ್ಟು ಅವರ ಕಾಂಗ್ರೆಸ್ ಕಛೇರಿಯಲ್ಲಿ ಕುಳಿತು ಸುಳ್ಳು ಸಮೀಕ್ಷೆಗಳನ್ನು ಮಾಡಿಸಿರುವುದು ರಾಜ್ಯದ ಜನತೆಗೆ ತಿಳಿದಿರುವ ಸತ್ಯ ಎಂದು ಕುಟುಕಿದರು.
ಯಡಿಯೂರಪ್ಪನವರ ಮೇಲೆ ನೂರಲ್ಲ ಇನ್ನೂರು ಕೇಸು ದಾಖಲಿಸಿದರು ಅವರು ಬಗ್ಗುವುದಿಲ್ಲ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡುವುದರ ಮೂಲಕ ನಿಮ್ಮ ಆಡಳಿತಕ್ಕೆ ಅಂತ್ಯ ಕಾಣಲಿದೆ ಕಾದು ನೋಡಿ ಎಂದು ಸವಾಲು ಹಾಕಿದರು.
ಈ ಸಂದರ್ಭ ಶಿವಕುಮಾರ್ ಗೋಪಿಕುಮಾರ್ ಮಾತನಾಡಿದರು. ಬಿ.ಎಲ್.ಶ್ರೀನಿವಾಸ್ ಎಪಿಎಂಸಿ ನಿದೇಶಕರಾದ ಶಿವಕುಮಾರ್, ನಾಗರಾಜು, ಈರಣ್ಣ, ಮಾಜಿ ನಿರ್ದೇಶಕ ಎಚ್.ಎಂ. ರೇವಣ್ಣಯ್ಯ, ಚಿನ್ನರಾಜು, ಶಂಕರಮೂರ್ತಿ, ಮರುಗುದ್ದಿ ಮನು ಉಪಸ್ಥಿತರಿದ್ದರು.







