ರಾಜೀವ್ ಗಾಂಧಿ ಹಂತಕ ಪೆರಾರಿ ವಾಲನ್ ಗೆ 30 ದಿನಗಳ ಪೆರೋಲ್

ಹೊಸದಿಲ್ಲಿ, ಆ.24: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾಪ್ರಕರಣದಲ್ಲಿ ಜೀವಾವಧಿ ಜೈಲು ಸಜೆ ಅನುಭವಿಸುತ್ತಿರುವ ಅಪರಾಧಿ ಪೆರಾರಿ ವಾಲನ್ ಗೆ ಕೇಂದ್ರ ಸರಕಾರ ಒಂದು ತಿಂಗಳ ಪೆರೋಲ್ ನೀಡಿದೆ.
26 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪೆರಾರಿ ವಾಲನ್ ಪೆರೋಲ್ ಮೂಲಕ ಜೈಲಿನಿಂದ ಹೊರಬರುತ್ತಿದ್ದಾನೆ. ಈತನನ್ನು 1991ರಲ್ಲಿ ಬಂಧಿಸಲಾಗಿತ್ತು.
ತಂದೆಯ ಚಿಕಿತ್ಸೆಯ ಉದ್ದೇಶಕ್ಕಾಗಿ ಪೆರಾರಿ ವಾಲನ್‌ಗೆ ಪೆರೋಲ್ ನೀಡಲಾಗಿದೆ.
Next Story





