ಹಜ್ಜ್ ಯಾತ್ರೆಗೆ ಬೀಳ್ಕೊಡುಗೆ
ಮಂಗಳೂರು, ಆ. 24: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಪ್ರತೀ ತಿಂಗಳು ಹೊರ ತರುತ್ತಿರುವ ಸುನ್ನೀ ಸಂದೇಶ ಬಳಗದ ವತಿಯಿಂದ ಹಜ್ ಯಾತ್ರೆ ಕೈಗೊಂಡ ಸುನ್ನೀ ಸಂದೇಶ ಅಂಕಣಗಾರ ಇಬ್ರಾಹೀಂ ದಾರಿಮಿ ಕಡಬ ಅವರಿಗೆ ಇತ್ತೀಚೆಗೆ ಸುನ್ನೀ ಸಂದೇಶ ಕಚೇರಿಯಲ್ಲಿ ಸುನ್ನೀಸಂದೇಶ ಪತ್ರಿಕೆಯ ಪ್ರಧಾನ ಸಂಪಾದಕಹಾಜಿ ಕೆ. ಎಸ್. ಹೈದರ್ ದಾರಿಮಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಹಜ್ ಯಾತ್ರೆಗೆ ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಎ. ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಮುಸ್ತಫ ಫೈಝಿ, ಕುಕ್ಕಿಲ ದಾರಿಮಿ, ಸಿದ್ಧೀಕ್ ಫೈಝಿ ಕರಾಯ, ಉಮರ್ ದಾರಿಮಿ, ಅಬ್ದುಲ್ಲಾ ಹಾಜಿ ಬೆಳ್ಮ, ರಫೀಕ್ ಮೌಲವಿಅಜ್ಜಾವರ, ಬಶೀರ್ ಅಝ್‌ಹರಿ ಬಾಯಾರ್, ಜಲೀಲ್ ಅಲ್‌ರಮಿ ಬೆಂಗರೆ, ಹಸೈನಾರ್ ಮೌಲವಿ ಅಜ್ಜಾವರ ಮೊದಲಾದವರು ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.
Next Story





