ಬಕ್ರೀದ್: ಸೆ.1ಕ್ಕೆ ಸರಕಾರಿ ರಜೆ ಘೋಷಿಸಲು ಮನವಿ

ಮಂಗಳೂರು, ಆ. 24: ಚಂದ್ರದರ್ಶನದ ಆಧಾರದಲ್ಲಿ ಬಕ್ರೀದ್ ಹಬ್ಬವು ಸೆ.1ರಂದು ಶುಕ್ರವಾರ ಆಚರಿಸುವುದಾಗಿ ಧಾರ್ಮಿಕ ಪ್ರಮುಖರು ನಿರ್ಧರಿಸಿರುತ್ತಾರೆ.
ಸರಕಾರಿ ರಜೆಯು ಸೆ.2ರ ಶನಿವಾರದಂದು ಇರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಜೆಯನ್ನು ಒಂದು ದಿನ ಪೂರ್ವೀಕರಿಸಿ ಸೆ.1ರ ಶುಕ್ರವಾರದಂದು ಘೋಷಿಸಬೇಕೆಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಜಿಲ್ಲಾಧಿಕಾರಿ ಡಾ.ಜಗದೀಶ್ ಅವರಲ್ಲಿ ಮನವಿ ಮಾಡಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಸದಸ್ಯರಾದ ಹಮೀದ್ ಕುದ್ರೋಳಿ, ಅಬ್ದುಲ್ ಜಲೀಲ್ ಯಾನೆ ಅದ್ದು, ಸಿ.ಎಂ.ಮುಸ್ತಫಾ, ಮೊಯ್ದಿನ್ ಮೋನು, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಅಶ್ರಫ್ ಕಿನಾರಾ, ಸಾಲಿಹ್ ಬಜ್ಪೆ, ಶಕೀಲ್ ಬಿಜೈ, ಶರೀಫ್ ದೇರಳಕಟ್ಟೆ, ತೌಸೀಫ್ ಬಜ್ಪೆ, ಮುಹಮ್ಮದ್ ಹನೀಫ್ ಯು. ಮತ್ತು ನೌಶಾದ್ ಬಂದರ್ ಉಪಸ್ಥಿತರಿದ್ದರು.
Next Story





