ಕಬ್ಬನ್ ಉದ್ಯಾನವನದಲ್ಲಿ ಆ.27ರಂದು ವಾಹನ ಸಂಚಾರ ನಿಷೇಧ
ಬೆಂಗಳೂರು, ಆ.24: ಶ್ರೀಚಾಮರಾಜೇಂದ್ರ ಉದ್ಯಾನವನ(ಕಬ್ಬನ್ ಪಾರ್ಕ್) ಒಳರಸ್ತೆಗಳಲ್ಲಿ ರವಿವಾರ ದಿನಗಳಂದು ಸಾರ್ವಜನಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಉದ್ಯಾನವನದ ಆವರಣದಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರ ಅನುಕೂಲಕ್ಕಾಗಿ ಪ್ರತಿ ರವಿವಾರದ ದಿನಗಳಂದು ವಿವಿಧ ಕಾರ್ಯ ಚಟುಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಆ.27ರ ರವಿವಾರದಂದು ಶ್ರೀಚಾಮರಾಜೇಂದ್ರ ಉದ್ಯಾನವನದ(ಕಬ್ಬನ್ ಉದ್ಯಾನವನ) ಬ್ಯಾಂಡ್ ಸ್ಟಾಂಡ್ ಆವರಣ ಹಾಗೂ ಮುಂಭಾಗದ ರಸ್ತೆಯಲ್ಲಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸದರಿ ಕಾರ್ಯಚಟುವಟಿಕೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಈ ಮೂಲಕ ಕೋರಲಾಗಿದೆ.
Next Story





