ಮಧುರೈ ಮಸೀದಿ ಬಳಿ ಸ್ಫೋಟಕ ಹುಡಿ ಹೊಂದಿದ ಪ್ಲಾಸ್ಟಿಕ್ ಚೆಂಡು ಪತ್ತೆ

ಹೊಸದಿಲ್ಲಿ, ಆ. 24: ಮಧುರೈ ಕಲಾವಾಸಲ್‌ನಲ್ಲಿ ಮಸೀದಿಯೊಂದರ ಪಾರ್ಕಿಂಗ್ ಪ್ರದೇಶದ ಸಮೀಪ ಗುರುವಾರ ಬೆಳಗ್ಗೆ ಸ್ಫೋಟಕ ಹುಡಿ ಒಳಗೊಂಡ ಪ್ಲಾಸ್ಟಿಕ್ ಚೆಂಡು ಪತ್ತೆಯಾಗಿದೆ.
ಈದ್ಗಾ ಮಸೀದಿಯ ಸಮೀಪದ ಪ್ರದೇಶದಲ್ಲಿ ಹರಿದ ಬಾಲ್ ಹಾಗೂ ಸ್ಫೋಟಕ ಹುಡಿಯನ್ನು ಮಧುರೈ ನಗರ ಬಾಂಬ್ ಪತ್ತೆ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪತ್ತೆ ಹಚ್ಚಿದರು. ಈ ಮಸೀದಿ ಕಾಝಿಮರ್ ದೊಡ್ಡ ಮಸೀದಿಯ ಒಂದು ಭಾಗವಾಗಿದೆ.
ಬಾಲ್ ಸಂದೇಹಾಸ್ಪದವಾಗಿ ಕಂಡು ಬಂತು. ಈ ಹಿನ್ನೆಲೆಯಲ್ಲಿ ತಾನು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಇಮಾನ್ ಶಹಜಹಾನ್ ತಿಳಿಸಿದ್ದಾರೆ. ಬೆಳಗ್ಗಿನ ನಮಾಜು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರು ಈ ವಸ್ತುಗಳನ್ನು ನೋಡಿ ಇಮಾಮರಿಗೆ ಮಾಹಿತಿ ನೀಡಿದ್ದರು.
Next Story





