ದಿನಕರನ್ ಬೆಂಬಲಿಗ 19 ಶಾಸಕರ ಅನರ್ಹಗೊಳಿಸಲು ಕೋರಿದ ಸರಕಾರದ ಮುಖ್ಯ ಸಚೇತಕ

ಚೆನ್ನೈ, ಆ. 24 : ಎಐಎಡಿಎಂಕೆಯಲ್ಲಿ ಅಧಿಕಾರಕ್ಕೆ ಕಚ್ಚಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟಿಟಿವಿ ದಿನಕರನ್ ಬೆಂಬಲಿಗ 19 ಶಾಸಕರನ್ನು ಅನರ್ಹಗೊಳಿಸಲು ಸರಕಾರ ಸಚೇತಕಾಜ್ಞೆ ಹೊರಡಿಸುವಂತೆ ಕೋರಲಾಗಿದೆ.
ಎರಡು ದಿನಗಳ ಹಿಂದೆ ರಾಜ್ಯದ ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿಯಾದ 19 ಶಾಸಕರನ್ನು ಅನರ್ಹಗೊಳಿಸುವ ವಿಚಾರವನ್ನು ಸರಕಾರದ ಮುಖ್ಯ ಸಚೇತಕ ಎಸ್. ರಾಜೇಂದ್ರನ್ ವಿಧಾನ ಸಭೆಯ ಸ್ಪೀಕರ್ ಮುಂದೆ ಚರ್ಚೆಗೆ ಎತ್ತಿಕೊಂಡರು.
ಪಳನಿಸ್ವಾಮಿಗೆ ನೀಡಿರುವ ಬೆಂಬಲ ಹಿಂದೆ ತೆಗೆಯುತ್ತಿದ್ದೇವೆ ಎಂದು ಶಾಸಕರು ರಾಜ್ಯಪಾಲರಲ್ಲಿ ತಿಳಿಸಿರುವುದಾಗಿ ರಾಜೇಂದ್ರನ್ ಹೇಳಿದರು.
ಫೆಬ್ರವರಿ 14ರಂದು ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅನಂತರ ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರಾಜೇಂದ್ರನ್ ತಿಳಿಸಿದ್ದಾರೆ.
Next Story





