ಮುಹಿಯುದೀನ್ ವುಡ್ ವರ್ಕ್ಸ್‌ನಿಂದ ಹೊಸ ಶ್ರೇಣಿಯ ಊದ್ ಆಯಿಲ್ ಬಿಡುಗಡೆ

ಅಜ್ಮಾನ್ (ಯುಎಇ), ಆ. 24: ಟಿಂಬರ್ ವ್ಯಾಪಾರದ ಮುಂಚೂಣಿ ಕಂಪೆನಿಗಳಲ್ಲಿ ಒಂದಾಗಿರುವ ಅಜ್ಮಾನ್ ಮೂಲದ ಮುಹಿಯುದೀನ್ ವುಡ್ ವರ್ಕ್ಸ್ ತನ್ನ ಉತ್ಪನ್ನಗಳ ಪಟ್ಟಿಗೆ ಊದ್ ವುಡ್ ಅನ್ನು ಸೇರ್ಪಡೆಗೊಳಿಸಿದೆ. ಕಂಪೆನಿಯ ಹೊಸ ಶ್ರೇಣಿಯ ಸುಗಂಧ ದ್ರವ್ಯ ಊದ್ ಆಯಿಲ್‌ಗೆ ಇದು ಇನ್ನೊಂದು ಸೇರ್ಪಡೆಯಾಗಿದೆ.
ಮುಹಿಯುದೀನ್ ವುಡ್ ವರ್ಕ್ಸ್‌ನ ಆಡಳಿತ ನಿರ್ದೇಶಕ ಬಿ.ಎಂ. ಅಶ್ರಫ್ ಹೇಳುವಂತೆ, ಊದ್ ವುಡ್ ಹಾಗೂ ಊದ್ ಆಯಿಲ್ ಭಾರತ, ಕಾಂಬೋಡಿಯಾ ಹಾಗೂ ಮಲೇಶ್ಯದಿಂದ ಬರುತ್ತದೆ. ಅನಂತರ ಅದರ ಅತ್ಯುಚ್ಛ ಗುಣಮಟ್ಟ ಕಾಯ್ದುಕೊಳ್ಳಲು ಪರಿಷ್ಕರಿಸುವುದು ತುಂಬಾ ಮುಖ್ಯವಾಗುತ್ತದೆ. ಯಾವಾಗಲೂ ಶುದ್ಧವಾದ, ಅತ್ಯುಚ್ಛ ಗುಣಮಟ್ಟದ ಉತ್ಪನ್ನವನ್ನು ಗ್ರಾಹಕರಿಗೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಊದ್ ವುಡ್ ಅನ್ನು 'ಅಗರ್‌ವುಡ್' ಎಂದು ಕೂಡಾ ಹೇಳಲಾಗುತ್ತದೆ. ಇದರ ಸುವಾಸನೆ ಅನನ್ಯ. ಜಗತ್ತಿನಾದ್ಯಂತ ಇದು ಜನಪ್ರಿಯ. ವೈದ್ಯಕೀಯ, ಊದುಕಡ್ಡಿ, ಸೌಂದರ್ಯವರ್ಧಕ ಹಾಗೂ ಸುಗಂಧ ದ್ರವ್ಯವಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಊದ್ ಎಣ್ಣೆಯನ್ನು ಅಗರ್ ಮರದಿಂದ ತೆಗೆಯಲಾಗುತ್ತದೆ. ಎಣ್ಣೆ ತೆಗೆಯುವ ಹಾಗೂ ಉತ್ಪಾದನೆ ಮಾಡುವ ಪ್ರಕ್ರಿಯೆ ಸ್ಪಲ್ಪ ಶ್ರಮದಾಯಕ. ಮುಹಿಯುದೀನ್ ವುಡ್ ವರ್ಕ್ಸ್ ಕಳೆದ ಹಲವು ವರ್ಷಗಳಿಂದ 4 ಖಂಡಗಳ 12ಕ್ಕೂ ಅಧಿಕ ದೇಶಗಳಿಗೆ ವಿವಿಧ ಪ್ರಭೇದದ ಉತ್ತಮ ಗುಣಮಟ್ಟದ ಟಿಂಬರ್‌ಗಳನ್ನು ರಫ್ತು ಮಾಡುತ್ತಿದೆ.
ಟಿಂಬರ್ ಪೂರೈಸುವುದು ನಮ್ಮ ವಿಶೇಷ ಸಾಮರ್ಥ್ಯ. ಸಮಯದ ಮಿತಿಯಲ್ಲಿ ವಿಶಿಷ್ಟ ಪ್ರಭೇದದ ಟಿಂಬರ್‌ಗಳ ಸಂಗ್ರಹ ಹಾಗೂ ಪೂರೈಕೆಯಲ್ಲಿ ನಾವು ಉತ್ತಮ ಸ್ಥಾನ ಹೊಂದಿದ್ದೇವೆ ಎಂದು ಅಶ್ರಫ್ ಹೇಳಿದ್ದಾರೆ. ನಮ್ಮ ಹೊಸ ಉತ್ಪನ್ನಗಳನ್ನು ಗ್ರಾಹಕರು ಮುಕ್ತ ಮನಸ್ಸಿನಿಂದ ಸ್ವಾಗತ್ತಿಸುತ್ತಾರೆ ಎಂಬ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.













