Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಗ್ರಾಮ್ಯ ಬದುಕಿನ ಸೊಗಡು-ನೀಲಿ ಮೂಗಿನ...

ಗ್ರಾಮ್ಯ ಬದುಕಿನ ಸೊಗಡು-ನೀಲಿ ಮೂಗಿನ ನತ್ತು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ25 Aug 2017 12:11 AM IST
share
ಗ್ರಾಮ್ಯ ಬದುಕಿನ ಸೊಗಡು-ನೀಲಿ ಮೂಗಿನ ನತ್ತು

‘‘ನೀಲಿ ಮೂಗಿನ ನತ್ತು’’ ಎಚ್. ಆರ್. ಸುಜಾತ ಅವರು ಬರೆದಿರುವ ಅನುಭವಗಳ ಸರಮಾಲೆ. ಬೆನ್ನುಡಿಯಲ್ಲಿ ಡಾ. ಬಿ.ಎ.ವಿವೇಕ ರೈ ಹೇಳುವಂತೆ, ಕನ್ನಡ ಕಥನ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಡುವ ಅಪೂರ್ವ ಕೃತಿ. ಊರು ತನ್ನ ದೇಸಿ ಗುಣವನ್ನು ಕಳೆದುಕೊಳ್ಳುವ ಮೂಲಕ ಅನಿಷ್ಟ ಮಾರಿಗಳನ್ನು ಬರಮಾಡಿಕೊಳ್ಳುವ ಆತಂಕದ ಶಬ್ದ ಚಿತ್ರಣಗಳನ್ನು ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕೃತಿಯ ಸೂಕ್ಷ್ಮಗಳನ್ನು, ಶಕ್ತಿಗಳನ್ನು ಮತ್ತು ದೌರ್ಬಲ್ಯಗಳನ್ನು ಸಹಜ ಭಾಷೆಯ ಒಳಗಿನಿಂದಲೇ ಅನಾವರಣ ಮಾಡುವ ಎಚ್.ಆರ್.ಸುಜಾತ ಅವರ ಕೃತಿ, ಕನ್ನಡದ ಸಿದ್ದ ಸಾಹಿತ್ಯ ಪ್ರಕಾರಗಳನ್ನು ಮತ್ತು ಸಿದ್ದ ಚಿಂತನ ಮಾದರಿಗಳನ್ನು ಮೀರುವ ಹೊಸ ಫಸಲು ಎಂದು ರೈ ಅಭಿಪ್ರಾಯಪಡುತ್ತಾರೆ. ಈ ಕೃತಿ ಒಂದು ಅನುಭವ ಕಥನವೇನೋ ನಿಜ. ಆದರೆ ಕೇವಲ ಖಾಸಗಿ ನೆಲೆಯಲ್ಲಿ ಉಳಿಯದೇ, ಸಾರ್ವತ್ರಿಕವಾಗಿ ವಿಸ್ತರಿಸಿಕೊಳ್ಳುತ್ತದೆ. ಗ್ರಾಮೀಣ ಬದುಕನ್ನು ತೆರೆದಿಡುವ ಸುಮಾರು 24 ಪ್ರಬಂಧಗಳು ಇಲ್ಲಿವೆ. ಇವು ಪ್ರತ್ಯೇಕವಾಗಿದ್ದಂತೆ ಕಂಡರೂ ಆಳದಲ್ಲಿ ಒಂದಕ್ಕೊಂದು ಬೆಸೆದುಕೊಳ್ಳುತ್ತಾ ಒಂದು ದೀರ್ಘ ಕಥನದ ರೀತಿಯಲ್ಲಿ ಮುಂದುವರಿಯುತ್ತದೆ.
 ಇಲ್ಲಿನ ನಿರೂಪಣೆಗಾಗಿ ಸುಜಾತ ಅವರು ಆಯ್ದುಕೊಂಡಿರುವ ನುಡಿ ಮಾದರಿ ಕೂಡ ಗಮನಿಸುವಂತಿದೆ. ಗ್ರಾಮ್ಯ ಕನ್ನಡದಲ್ಲೇ ತನ್ನ ಅನುಭವಗಳನ್ನು ನಿರೂಪಿಸುವ ಮೂಲಕ, ಗ್ರಾಮ್ಯ ಬದುಕಿನ ತಾಜಾತನವನ್ನು ಹೊರಚೆಲ್ಲಲು ಅವರಿಗೆ ಸಾಧ್ಯವಾಗಿದೆ. ಬಳಸಿದ ಭಾಷೆಯ ಸೌಂದರ್ಯ, ಅವರು ಹೇಳುವ ಕಥನಕ್ಕೆ ಪೂರಕವಾಗಿದೆ. ಇಲ್ಲಿ ನಿರೂಪಿಸಲ್ಪಟ್ಟ ಬಹುತೇಕ ಘಟನೆಗಳು ಲೇಖಕಿಯ ಬಾಲ್ಯಕಾಲದವು. ಕೆಲವು ಅನುಭವಗಳನ್ನು ಹೊರತು ಪಡಿಸಿದರೆ ಹೆಚ್ಚಿನವು ಹಳ್ಳಿ ಪ್ರದೇಶಗಳಲ್ಲೇ ನಡೆಯುತ್ತವೆ. ತಮ್ಮ ಬರಹಗಳಲ್ಲಿ ಹಳ್ಳಿಯ ಒಳಿತು ಕೆಡುಗಳನ್ನೂ ಅತ್ಯಂತ ಲವಲವಿಕೆಯ ನಿರೂಪಣೆಯ ಮೂಲಕ ಬಯಲಿಗೆಳೆಯುತ್ತಾರೆ. ಹೇಗೆ ಹಳ್ಳಿ ಹಂತಹಂತವಾಗಿ ಪತನದ ಕಡೆಗೆ ಸಾಗುತ್ತಿದೆ ಎನ್ನುವುದರ ಸೂಚನೆಯನ್ನೂ ಅವರು ನೀಡುತ್ತಾರೆ. ಇಲ್ಲಿರುವ ಬರಹಗಳು ಒಡಮೂಡಿರುವ ಬಗೆಯನ್ನೂ ಲೇಖಕಿ ತಮ್ಮ ಮುನ್ನುಡಿಯಲ್ಲಿ ಹೃದ್ಯವಾಗಿ ಕಟ್ಟಿಕೊಡುತ್ತಾರೆ. ವಸ್ತು, ನಿರೂಪಣೆ, ಭಾಷೆ ಹೀಗೆ ಬೇರೆ ಕಾರಣಗಳಿಗಾಗಿ ಈ ಕೃತಿ ಗಮನ ಸೆಳೆಯುತ್ತದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 190 ರೂ.

share
-ಕಾರುಣ್ಯಾ
-ಕಾರುಣ್ಯಾ
Next Story
X