ಜಾಗೃತಿ ಮೂಡಲಿ
ಮಾನ್ಯರೆ,
ಇತ್ತ್ತೀಚೆಗೆ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸುವ ಅಪಾಯಕಾರಿ ಬ್ಲೂ ವೇಲ್ ಆನ್‌ಲೈನ್ ಆಟ ಹಲವಾರು ಹದಿಹರೆಯದ ಮಕ್ಕಳ ಜೀವವನ್ನು ತೆಗೆದಿದೆ. ಸುಮಾರು ಇನ್ನೂರಕ್ಕೂ ಅಧಿಕ ಮಕ್ಕಳನ್ನು ಇದು ಬಲಿತೆಗೆದುಕೊಂಡಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಹಲವಾರು ಅಪಾಯಕಾರಿ ಆನ್‌ಲೈನ್ ಆಟಗಳು ಮಕ್ಕಳನ್ನು ಅಂಟಿಕೊಳ್ಳುವಂತೆ ಮಾಡಿದೆ. ಇದರ ಬಗ್ಗೆ ಹೆಚ್ಚಿನ ತಂದೆ ತಾಯಿಯರಿಗೆ ಅರಿವೇ ಇಲ್ಲದಾಗಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳು ಅಂತರ್ಜಾಲ ಆಟಗಳಿಗೆ ಅಂಟಿಕೊಳ್ಳದಂತೆ ವಿದ್ಯಾಭ್ಯಾಸದ ಕಡೆಗೆ ಗಮನಕೊಡಲು ಸೂಕ್ತವಾದ ಮಾರ್ಗದರ್ಶನ ನೀಡಬೇಕಾಗಿದೆ. ಅಲ್ಲದೆ ಸರಕಾರಗಳು ಕೂಡಾ ಇಂತಹ ಆಟಗಳು ಭಾರತ ಪ್ರವೇಶಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
Next Story





