ಮುಂಡಗೋಡ: ನವವಿವಾಹಿತ ದಂಪತಿ ಆತ್ಮಹತ್ಯೆ
.jpg)
ಮುಂಡಗೋಡ, ಆ.24: ಎರಡು ತಿಂಗಳ ಹಿಂದೆ ವಿವಾಹವಾಗಿದ್ದ ಉತ್ತರಕನ್ನಡ ಜಿಲ್ಲೆಯ ನವದಂಪತಿಯೊಂದು ಮುಂಡಗೋಡ ಬಳಿಯ ಬಾಚಣಿಕೆ ಡ್ಯಾಂ ಪಕ್ಕ ಆತ್ಮಹತ್ಯ ಮಾಡಿಕೊಂಡಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ಹೊಸೂರ ನಿವಾಸಿಗಳಾದ ವೆಂಕಟೇಶ ಅಲಿಯಾಸ್ ಜೋಗಿ ರಾಮರೆಡ್ಡಿ ಮಲ್ಲಸಮುದ್ರ(28) ಹಾಗೂ ಆತನ ಪತ್ನಿ ಅಶ್ವಿನಿ(25) ಬಾಚಣಿಕೆ ಡ್ಯಾಂ ಬಳಿಯ ನರ್ಸರಿಯಲ್ಲಿ ಮರಕ್ಕೆ ಒಂದೇ ಪ್ಲಾಸ್ಟೀಕ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ನವದಂಪತಿಯಾಗಿದ್ದಾರೆ.
ಆತ್ಮಹತ್ಯಮಾಡಿಕೊಂಡಿರುವ ವಿಷಯ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯಿಂದ ಟಾಟಾ ಟವೇರಾ ಕಾರಿನಲ್ಲಿ ಬಂದಿದ್ದ ವೆಂಕಟೇಶ, ಅಶ್ವಿನಿ ವಾಹನವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಮುನ್ನ ನಮ್ಮ ಸಾವಿಗೆ ನಾವೆ ಕಾರಣ ಎಂದು ಡೆತ್ ನೋಟ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮುಂಡಗೋಡ ಪಿಸ್ಸೈ ಲಕ್ಕಪ್ಪ ನಾಯಕ್ ಮತ್ತು ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿ ಪ್ರಕರನ ದಾಖಲಿಸಿದ್ದಾರೆ.
Next Story





