ಬಿಸ್ಕೆಟ್ ಉಪಯೋಗಿಸಿ ಕಲಾವಿದ ಶ್ರೀನಾಥ್ ರಿಂದ ಗಣೇಶನ ಕಲಾಕೃತಿ ರಚನೆ

ಉಡುಪಿ, ಆ. 25: ಇಲ್ಲಿನ ವೀಚೀ ಮೊಟಾರ್ಸ್ ನಲ್ಲಿ ಮತ್ತೊಂದು ವಿಶಿಷ್ಟ ಗಣಪ ಮೂಡಿಬಂದಿದೆ. ಸುಮಾರು 9 ಅಡಿ ಎತ್ತರದ ಗಣಪ ಇಲ್ಲಿ ಎದ್ದು ನಿಂತಿದೆ.
ಮಣ್ಣು, ಚಿನ್ನ ಬೆಳ್ಳಿಯಿಂದ ಮಾಡಿದ ಗಣಪನ ಮೂರ್ತಿಯಲ್ಲ ಇದು. ಕಲಾವಿದ ಶ್ರೀನಾಥ್ ಅವರು ಮೂರು ದಿನಗಳ ಸತತ ಪ್ರಯತ್ನದಿಂದ ಈ ಮುದ್ದು ಗಣೇಶನ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.
ಸುಮಾರು 15 ಕೆಜಿ ಬಿಸ್ಕೆಟ್ ಉಪಯೋಗಿಸಿ ಗಣೇಶನ ಕಲಾಕೃತಿ ರಚನೆ ಮಾಡಿದ್ದಾರೆ. ಚೌತಿಗೆ ಹೊಸ ಹೊಸ ಪರಿಸರ ಸ್ನೇಹಿ ಗಣೇಶನ ಕಲಾಕೃತಿಯಲ್ಲಿ ಮೂಡಿಸುವ ಈ ಕಲಾವಿದ ಈ ಬಾರಿ ಬಿಸ್ಕೆಟ್ ಗಣೇಶನ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಬಿಸ್ಕೆಟ್ ಗಣೇಶನ ಮುಂದೆ ನಿಂತು ಜನ ಅಚ್ಚರಿಯಿಂದ ನೋಡಿದ್ದು, ಮಾತ್ರವಲ್ಲದೇ ಸೆಲ್ಫಿ ಕಿಕ್ಲಿಸಿಕೊಂಡು ಖುಷಿಪಟ್ಟರು.
Next Story





