ಕಾಸರಗೋಡು: ನೇಣು ಬಿಗಿದು ಕೃಷಿಕ ಆತ್ಮಹತ್ಯೆ
.jpg)
ಕಾಸರಗೋಡು, ಆ. 25: ಕೃಷಿಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದೂರು ಬೆಳ್ಳೂರುನಲ್ಲಿ ನಡೆದಿದೆ.
ಅಡ್ವಳ ಕೊಯಂಗೋಡುನ ಕುಂಞಪ್ಪ ನಾಯ್ಕ(75) ಮೃತರು ಎಂದು ಗುರುತಿಸಲಾಗಿದೆ. ಇವರ ಮೃತದೇಹ ಮನೆ ಸಮೀಪದ ಗದ್ದೆ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ಆದೂರು ಪೊಲೀಸರು ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ
Next Story





