ಮೆಗಾಸ್ಟಾರ್ ಚಿತ್ರದಲ್ಲಿ ಕಿಚ್ಚ ಸುದೀಪ್

ಆಗಸ್ಟ್ 22ರಂದು ಮೆಗಾ ಸ್ಟಾರ್ ಚಿರಂಜೀವಿ ಅವರ 22ನೆ ಹುಟ್ಟುಹಬ್ಬ ಆಚರಿಸುತ್ತಿರುವಾಗಲೇ, ಅವರ ಅಭಿನಯದ 151ನೆ ಚಿತ್ರ ಸೈ ರಾ ನರಸಿಂಹ ರೆಡ್ಡಿ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದರೊಂದಿಗೆ ಚಿತ್ರದ ನಟ, ನಟಿಯರ ಹಾಗೂ ತಂತ್ರಜ್ಞರನ್ನು ಪರಿಚಯಿಸುವ ಟೀಸರ್ ಕೂಡಾ ಹೊರಬಂದಿದೆ. ಈ ಟೀಸರ್ ಮೂಲಕ ಕನ್ನಡದ ಕಿಚ್ಚ ಸುದೀಪ್, ಸೈರಾ ನರಸಿಂಹ ರೆಡ್ಡಿಯಲ್ಲಿ ನಟಿಸುವುದು ಖಚಿತವಾಗಿದೆ. ಬ್ರಿಟಿಷರ ವಿರುದ್ಧ ಬಂಡೆದಿದ್ದ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿಯ ಕುರಿತಾದ ಕಥಾವಸ್ತುವನ್ನು ಹೊಂದಿರುವ ಈ ಚಿತ್ರವು ಬರೋಬ್ಬರಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸುದೀಪ್ ಅಲ್ಲದೆ ಅಮಿತಾಭ್ ಬಚ್ಚನ್, ಜಗಪತಿಬಾಬು, ನಯನತಾರಾ ಮತ್ತಿತರ ಜನಪ್ರಿಯ ನಟನಟಿಯರು ನಟಿಸಿದ್ದಾರೆ.
ಈ ಚಿತ್ರದಲ್ಲಿ ಸುದೀಪ್‌ಗೆ ಅತ್ಯಂತ ಪವರ್‌ಫುಲ್ ಪಾತ್ರವೊಂದನ್ನು ನೀಡಲಾಗಿದೆ. ಸ್ವಾರಸ್ಯಕರವೆಂದರೆ ಸುದೀಪ್, ಈ ಚಿತ್ರದಲ್ಲಿ ಕನ್ನಡ ಹಾಗೂ ತಮಿಳುಭಾಷೆಗಳಲ್ಲಿ ಕೆಲವು ಡೈಲಾಗ್‌ಗಳನ್ನು ಹೇಳಲಿದ್ದಾರೆ.
ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸುರೇಂದ್ರ ರೆಡ್ಡಿ ನಿರ್ದೇಶಕರು. ’
ಈಗ ಚಿತ್ರದ ಮೂಲಕ ತೆಲುಗು ಚಿತ್ರರಸಿಕರ ಮನೆಮಾತಾಗಿರುವ ಸುದೀಪ್, ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಯಾವ ರೀತಿ ಮೋಡಿ ಮಾಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.







